ಮಗುವಿನ ಹೆಸರಿಗೆ ಪ್ರಿಯಾಂಕಾ-ನಿಕ್​​ ಸಂಸ್ಕೃತ ಪದವೇ ಆಯ್ಕೆ ಮಾಡಿದ್ದು ಏಕೆ?

Priyanka
Published on

ಮುಂಬೈ: ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ದಂಪತಿ ತಮ್ಮ ಮುದ್ದಾದ ಮಗುವಿನ ಹೆಸರನ್ನು ಬಹಿರಂಗಗೊಳಿಸಿದ್ದಾರೆ.

ಬಾಡಿಗೆ ತಾಯ್ತನದ ಮೂಲಕ ಕಳೆದ ಜನವರಿಯಲ್ಲಿ ಹೆಣ್ಣು ಮಗುವಿಗೆ ಪೋಷಕರಾದ ಪ್ರಿಯಾಂಕ ತನ್ನ ಮಗುವಿನ ಹೆಸರನ್ನು ತಿಳಿಸಿದ್ದು, ಮಾಲತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರಿಟ್ಟಿದ್ದಾರಂತೆ.

ಮಾಲತಿ ಎಂಬುದು ಸಂಸ್ಕೃತ ಪದವಾಗಿದ್ದು, ಹೂವಿನ ಸುವಾಸನೆ ಎಂಬ ಅರ್ಥವನ್ನು ನೀಡುತ್ತದೆ. ಹಾಗೆ ಮೇರಿ ಎಂದರೆ ಸಮುದ್ರದ ತಾರೆ ಹಾಗೂ ಫ್ರೆಂಚ್​ನಲ್ಲಿ ಜೀಸಸ್​ನ ತಾಯಿ ಎಂಬರ್ಥ ನೀಡುತ್ತದೆ.

ಇನ್ನು ಚೋಪ್ರಾ ಹಾಗೂ ಜೋನಸ್​​ ಇಬ್ಬರ ಹೆಸರನ್ನು ಸೇರಿಸಲಾಗಿದೆ ಎಂದು ಪ್ರಿಯಾಂಕಾ ಚೋಪ್ರಾ ಹಾಲಿವುಡ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net