ಅಕ್ಷಯ್​ ಕುಮಾರ್​ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದು ಏಕೆ? ಕಾರಣ ಇಲ್ಲಿದೆ...

Akshay kumar
Published on

ನವದೆಹಲಿ: ಸದಾ ಸಾಮಾಜಿಕ ಕಳಕಳಿ ಹಾಗೂ ದೇಶದ ಮೇಲೆ ಅಭಿಮಾನ ತೋರುವ ಬಾಲಿವುಡ್​ ನಟ ಅಕ್ಷಯ್​ಕುಮಾರ್​ ಇದೀಗ ಅಭಿಮಾನಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತಂಬಾಕು ಉತ್ಪನ್ನಗಳ ವಿರುದ್ಧವೇ ಹಲವು ಬಾರಿ ಜಾಹಿರಾತುಗಳಲ್ಲಿ ಸಂದೇಶ ನೀಡಿದ್ದ ಅಕ್ಷಯ್​ ಇದೀಗ ತಂಬಾಕು ಉತ್ಪನ್ನದ ಜಾಹಿರಾತಿನಲ್ಲಿ ಕಾಣಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.

ವಿಮಲ್​ ಇಲಾಚಿ ಎಂಬ ಜಾಹಿರಾತಿನಲ್ಲಿ ಅಕ್ಷಯ್​​ ಕುಮಾರ್​ ಕಾಣಿಸಿಕೊಂಡಿರುವುದೇ ಅಭಿಮಾನಿಗಳಲ್ಲಿ ಬೇಸರ ಮೂಡಲು ಕಾರಣವಾಗಿದೆ. ತಂಬಾಕು ಸೇವನೆ ಮಾಡಬೇಡಿ ಎಂದು ಹೇಳುತ್ತಿದ್ದ ನೀವೇ ಇದೀಗ ಅದರ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್​ ಕುಮಾರ್​ ಅಭಿಮಾನಿಗಳು ಪಶ್ನೆಯನ್ನಿಟ್ಟಿದ್ದರು.

ಅಭಿಮಾನಿಗಳ ಪ್ರಶ್ನೆಯನ್ನು ಮನಗಂಡಿರುವ ಅಕ್ಷಯ್​ಕುಮಾರ್​ ದಯವಿಟ್ಟು ಕ್ಷಮಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿರುವ ನನ್ನ ಅಭಿಮಾನಿಗಳಲ್ಲಿ ಬೇಸರ ಮೂಡಿಸಲು ನನಗೆ ಇಷ್ಟವಿಲ್ಲ. ಹಾಗಾಗಿ ಈ ಜಾಹಿರಾತಿನಿಂದ ನಾನು ಹೊರಬರುವೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ವಿಮಲ್​ ಇಲಾಚಿ ಜಾಹಿರಾತಿನಲ್ಲಿ ಶಾರೂಖ್​ ಖಾನ್​ ಹಾಗೂ ಅಜಯ್​ ದೇವಗನ್​ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಇಬ್ಬರು ನಟರು ಈವರೆಗೂ ಏನೂ ಪ್ರತಿಕ್ರಿಯೆ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net