Priyanka Chopra: ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ (Priyanka Chopra), ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಗೆ ಎಲ್ಲರ ಗಮನ ಸೆಳೆಯಬೇಕು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೇವಲ ತಮ್ಮ ಅದ್ಭುತ ಉಡುಪುಗಳ ಆಯ್ಕೆಯಿಂದ ಮಾತ್ರವಲ್ಲದೆ, ತಮ್ಮಲ್ಲಿರುವ ಅದ್ಭುತ ಆತ್ಮವಿಶ್ವಾಸ ಮತ್ತು ವರ್ಚಸ್ವಿ ವ್ಯಕ್ತಿತ್ವದ ಮೂಲಕ ಅವರು ಹೋದ ಕಡೆಯಲ್ಲೆಲ್ಲಾ ತಕ್ಷಣವೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಬುಧವಾರ (ಜೂ 24), ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಐದು ದಿನಗಳ ಅಂತರರಾಷ್ಟ್ರೀಯ ಸೃಜನಶೀಲತೆಯ ಉತ್ಸವವಾದ ‘ಕ್ಯಾನೆಸ್ ಲಯನ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಈ ನಟಿ ಮತ್ತೊಮ್ಮೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.