ಲಿಂಗ ಸಮಾನತೆ ಅಡುಗೆಮನೆಯಿಂದಲೇ ಆರಂಭವಾಗಲಿ: ಸೋಮಾರಿ ಪುರುಷರ ವಿರುದ್ಧ ಗುಡುಗಿದ ಪ್ರಿಯಾಂಕಾ ಚೋಪ್ರಾ! Priyanka Chopra

Priyanka Chopra(ಚಿತ್ರ X)
Priyanka Chopra(ಚಿತ್ರ X)
Published on
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ಸ್ಟೀರಿಯೊಟೈಪ್‌ಗಳ (Gender Stereotypes) ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿದ್ದಾರೆ. ವಿಶೇಷವಾಗಿ ಸಾಂಪ್ರದಾಯಿಕವಾಗಿ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲಾದ ಮನೆಯ ಕೆಲಸಗಳ ಕುರಿತು ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 
ಕ್ಯಾನೆಸ್ ಲಯನ್ಸ್‌ನ ಸಂದರ್ಶನದಲ್ಲಿ ಮಾತನಾಡಿದ ಪ್ರಿಯಾಂಕ, ಅಡುಗೆ ಮಾಡುವುದು, ಮನೆ ಸ್ವಚ್ಛಗೊಳಿಸುವುದು ಮತ್ತು ನಿರ್ವಹಣೆ ಮಾಡುವುದು ಕೇವಲ ಮಹಿಳೆಯರ ಜವಾಬ್ದಾರಿಯಲ್ಲ. ಬದಲಿಗೆ ಇವು ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಯೂ ಕಲಿಯಬೇಕಾದ ಅತ್ಯಗತ್ಯ "ಜೀವನ ಕೌಶಲ್ಯಗಳು" ಎಂದು ಸ್ಪಷ್ಟಪಡಿಸಿದ್ದಾರೆ.
ಅದೇ ಸಂದರ್ಶನದಲ್ಲಿ ಪ್ರಿಯಾಂಕಾ ಜಾಗತಿಕ ಮಟ್ಟದಲ್ಲಿ ಸಿನಿಮಾ ರಂಗ ಮತ್ತು ಕಥೆ ಹೇಳುವ ಶೈಲಿ ಹೇಗೆ ಬದಲಾಗುತ್ತಿದೆ ಎಂಬುದರ ಕುರಿತು ಆಳವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿನ ಹಾಲಿವುಡ್‌ನ ಸೂಪರ್‌ ನ್ಯಾಚುರಲ್ ಹಾರರ್ ಸಿನಿಮಾ 'ಅಬ್ಸೆಷನ್' ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಉದಾಹರಣೆಯಾಗಿ ನೀಡಿದ ಅವರು, ತಂತ್ರಜ್ಞಾನದ ಬೆಳವಣಿಗೆಯು ಸಿನಿಮಾ ನಿರ್ಮಾಣ ಪ್ರಕ್ರಿಯೆಯನ್ನು ಹೇಗೆ ಸುಲಭಗೊಳಿಸಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ತಂತ್ರಜ್ಞಾನದ ಪ್ರಗತಿಯು ಪ್ರತಿಯೊಬ್ಬರಿಗೂ ಕಂಟೆಂಟ್ ಕ್ರಿಯೇಟ್ ಮಾಡಲು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿದೆ. ಇದರಿಂದಾಗಿ ಇಂದು ಹೆಚ್ಚು ಜನರು ತಮ್ಮದೇ ಆದ ವಿಶಿಷ್ಟ ಕಥೆಗಳನ್ನು ಜಗತ್ತಿನ ಮುಂದೆ ಇಡಲು ಸಾಧ್ಯವಾಗುತ್ತಿದೆ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ನೀವೇನಾದರೂ ಸಿನಿಮಾ ರಂಗಕ್ಕೆ ಬರಬೇಕೆಂದರೆ, ಮೊದಲು ನೀವು ಯಾವ ವಿಭಾಗದಲ್ಲಿ ಕೆಲಸ ಮಾಡಬೇಕೆಂದು ನಿರ್ಧರಿಸಬೇಕಾಗಿತ್ತು (ಉದಾಹರಣೆಗೆ: ಕ್ಯಾಮೆರಾ, ಎಡಿಟಿಂಗ್, ನಿರ್ದೇಶನ ಇತ್ಯಾದಿ). ಆ ದಿನಗಳಲ್ಲಿ ಚಿತ್ರರಂಗವನ್ನು ಪ್ರವೇಶಿಸುವುದು ಮತ್ತು ಅಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ನಿಜಕ್ಕೂ ಅತ್ಯಂತ ಕಠಿಣವಾದ ಕೆಲಸವಾಗಿತ್ತು ಎಂದರು. 
ನಿಮಗೆ ಒಂದು ಐಡಿಯಾ ಇದೆ ಅಂತ ಅನಿಸಿದರೆ, ಅದನ್ನು ಶೂಟ್ ಮಾಡಿ, ಯೂಟ್ಯೂಬ್‌ನಲ್ಲಿ ಹಾಕಿ, ಅದು ಈಗಷ್ಟೇ ಬಂದಿರುವ ' ಆಬ್ಸೆಷನ್' ಸಿನಿಮಾ ಆಗಬಹುದು. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು, ಮನರಂಜನೆ ನೀಡಲು ಇದು ಒಂದು ಅದ್ಭುತ ಸಮಯ ಇದಾಗಿದೆ ಎಂದು ಹೇಳಿದ್ದಾರೆ.
ಎಂಟು ವರ್ಷಗಳ ವಿರಾಮದ ನಂತರ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿರುವ ಪ್ರಿಯಾಂಕಾ, ಎಸ್.ಎಸ್. ರಾಜಮೌಳಿ ನಿರ್ದೇಶನದ ವಾರಣಾಸಿಯಲ್ಲಿ ನಟ ಮಹೇಶ್ ಬಾಬು ಮತ್ತು ಪೃಥ್ವಿರಾಜ್​ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ. 
1,000 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಪ್ಯಾನ್-ಇಂಡಿಯಾ ಚಿತ್ರವು ಇದುವರೆಗೆ ಮಾಡಿದ ಅತ್ಯಂತ ದುಬಾರಿ ಭಾರತೀಯ ಚಿತ್ರಗಳಲ್ಲಿ ಒಂದಾಗುವ ನಿರೀಕ್ಷೆಯಿದ್ದು, ಈ ಚಿತ್ರವು ಏಪ್ರಿಲ್ 2027 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net