ಪ್ರಿಯಾಂಕಾ ಚೋಪ್ರಾ ಖುಷಿಗೆ ಕಾರಣವೇನಿರಬಹುದು ಗೆಸ್​ ಮಾಡಿ ...

Priyanka Chopra - Final
Published on

ಪ್ರಿಯಾಂಕಾ ಚೋಪ್ರಾ ತುಂಬಾ ಖುಷಿಯಾಗಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಪ್ರಿಯಾಂಕಾ ತಮ್ಮ ಆತ್ಮಚರಿತ್ರೆ ಬರೆಯುತ್ತಿರುವ ವಿಷಯವೊಂದು ಎರಡು ವರ್ಷಗಳ ಹಿಂದೆ ಕೇಳಿ ಬಂದಿತ್ತು. ಅದೀಗ ಸಂಪೂರ್ಣವಾಗಿ, ಪ್ರಿಂಟ್​ ಆಗುತ್ತಿದೆ. ಅಷ್ಟೇ ಅಲ್ಲ, ಅದು ಕೆಲವೇ ದಿನಗಳಲ್ಲಿ ಓದುಗರಿಗೆ ಸಿಗಲಿದೆ.

ತಾವು ಇದುವರೆಗೂ ಕಂಡ ಬದುಕನ್ನು 'ಅನ್​ಫಿನಿಶ್ಡ್​' ಹೆಸರಲ್ಲಿ ಬರೆಯುತ್ತಿರುವುದಾಗಿ 2018ರಲ್ಲೇ ಘೋಷಿಸಿದ್ದರು. ಆ ನಂತರ ಸಮಯ ಸಿಕ್ಕಾಗಲೆಲ್ಲಾ ಬರೆಯುತ್ತಿದ್ದ ಅವರು, ಇತ್ತೀಚೆಗೆ ಈ ವಿಷಯವಾಗಿ ಅವರು ಪೋಸ್ಟ್​ ಸಹ ಹಾಕಿದ್ದರು. 'ಅನ್​ಫಿನಿಶ್ಡ್​ ಈಸ್​ ಫಿನಿಶ್ಡ್​​' ಅಂತ ಬರೆದುಕೊಂಡಿದ್ದರು. ಸದ್ಯದಲ್ಲೇ ಅದನ್ನು ಪ್ರಿಂಟಿಗೆ ಕಳಿಸುವುದಾಗಿ ಹೇಳಿದ್ದರು. ಇದೀಗ ಆ ಪುಸ್ತಕ್​ ಪ್ರಿಂಟ್​ ಆಗುತ್ತಿದೆಯಂತೆ.

ಆ ಪುಸ್ತಕವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಉತ್ಸುಕತೆಯಲ್ಲಿರುವ ಪ್ರಿಯಾಂಕಾ, 'ಈ ಪುಸ್ತಕದ ಪ್ರತಿ ಶಬ್ಧವನ್ನು ಸಾಕಷ್ಟು ವಿಮರ್ಶೆ ಮಾಡಿದ ನಂತರ ಬರೆದಿದ್ದೇನೆ ಮತ್ತು ಇದು ಈ ಪುಸ್ತಕವು ನನ್ನ ಜೀವನದ ಪ್ರತಿಫಲನ' ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಜೀವನದಲ್ಲಾದ ಹಲವು ಘಟನೆಗಳನ್ನು ಪದಗಳಲ್ಲಿ ಹಿಡಿದಿಡಬೇಕು ಎಂದು ಪ್ರಿಯಾಂಕಾ ಅವರ ಮನಸ್ಸಿನಲ್ಲಿ ಬಹಳ ದಿನಗಳಿಂದ ಇತ್ತಂತೆ. 'ನನಗೆ ಪುಸ್ತಕ ಬರೆಯುವ ಆಸೆ ಬಹಳ ದಿನಗಳಿಂದ ಇತ್ತು. ಆದರೆ, ಸ್ವಲ್ಪ ಬ್ಯುಸಿ ಇದ್ದುದರಿಂದ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ತಡವಾಗುತ್ತಲೇ ಹೋಯಿತು. ನಾನು ನನ್ನ ಜೀವನವನ್ನು ಪುಸ್ತಕ ರೂಪದಲ್ಲಿ ಹಿಡಿದಿಡುವುದಕ್ಕಿಂತ ಮುನ್ನ ಇನ್ನೂ ಹೆಚ್ಚು ಸಾಧನೆ ಮಾಡಬೇಕು, ಇನ್ನಷ್ಟು ಜೀವಿಸಬೇಕು ಎಂದು ಆಸೆ ಪಟ್ಟಿದ್ದೆ. ಆದರೆ, ಈಗ ಹಿಂದಿರುಗಿ ನೋಡಿದಾಗ, ನನ್ನ ಸಾಧನೆಯ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ ಮತ್ತು ಈ ಕ್ಷಣದಲ್ಲಿ ಈ ಪುಸ್ತಕ ಬಂದರೆ ಚೆನ್ನಾಗಿರುತ್ತದೆ ಎಂಬ ಕಾರಣಕ್ಕೆ ಈ ಪುಸ್ತಕ ಬರೆದಿದ್ದೇನೆ' ಎಂದು ಅವರು ಹೇಳಿದ್ದಾರೆ.

ಅಂದಹಾಗೆ, ಈ ಪುಸ್ತಕವನ್ನು ಪೆಂಗ್ವಿನ್​ ರಾಂಡಮ್​ ಹೌಸ್​ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net