100 ದಿನಗಳ ಬಳಿಕ ಮಗಳನ್ನು ಮನೆಗೆ ಕರೆತಂದ ಪ್ರಿಯಾಂಕಾ-ನಿಕ್​ ದಂಪತಿ: ಫೋಟೋ ಹಂಚಿಕೊಂಡು ಸಂಭ್ರಮ!

Priyanka Chopra
Published on

ನ್ಯೂಯಾರ್ಕ್​: ಬಾಡಿಗೆ ತಾಯಿ ಮೂಲಕ ಹೆಣ್ಣುಮಗುವಿನ ಪೋಷಕರಾದ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್​ ಜೋನಸ್​ ಇದೇ ಮೊದಲ ಬಾರಿಗೆ ತಮ್ಮ ಮುದ್ದಾದ ಮಗಳ ಫೋಟೋವನ್ನು ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

100 ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ಮಗುವನ್ನು ಕರೆತಂದಿರುವ ಪ್ರಿಯಾಂಕಾ ತಮ್ಮ ಮಗಳು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಸಂಪೂರ್ಣ ಆರೋಗ್ಯವಾಗಿರುವ ನಮ್ಮ ಮಗಳು ನಮ್ಮ ಮನೆಗೆ ಬಂದಿದ್ದಾಳೆ, ಅವಳನ್ನು ಸ್ವಾಗತಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮಾಲತಿ ಮಾರಿಯಾ ಛೋಪ್ರಾ ಜೋನಸ್​ ಎಂದು ಮಗಳಿಗೆ ಹೆಸರಿಟ್ಟಿರುವ ಪ್ರಿಯಾಂಕಾ, ತಮ್ಮ ಮಗಳು ಅವಧಿ ಪೂರ್ವವೇ ಜನಿಸಿದ್ದರಿಂದ ಇಷ್ಟು ದಿನ ಚಿಕಿತ್ಸೆಯ ಅಗತ್ಯವಿತ್ತು, ಹಾಗಾಗಿ ಆಸ್ಪತ್ರೆಯಲ್ಲೇ ಇರಿಸಲಾಗಿತ್ತು. ಇನ್ನು ಮುಂದೆ ನಮ್ಮ ಜೀವನ ಇನ್ನಷ್ಟು ಸುಂದರವಾಗಿರಲಿದೆ ಎಂದು ಪ್ರಿಯಾಂಕಾ ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net