More

    ಮುಂಬೈ ರೈಲು ನಿಲ್ದಾಣದ ಫ್ಲಾಟ್​ಫಾರಂ ಟಿಕೆಟ್​ 50 ರೂ.ಗೆ ಏರಿಕೆ: ರೈಲ್ವೆ ಇಲಾಖೆಯಿಂದ ಆದೇಶ

    ಮುಂಬೈ: ರೈಲ್ವೇ ನಿಲ್ದಾಣದ ಫ್ಲಾಟ್​ಫಾರಂ ಟಿಕೆಟ್​ ಬೆಲೆಯನ್ನು 50 ರೂ.ಎ ಏರಿಕೆ ಮಾಡಿ ರೈಲ್ವೇ ಇಲಾಖೆ ಆದೇಶಿಸಿದ್ದು, ಇದು ಮುಂದಿನ 15 ದಿನಗಳವರೆಗೆ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಿದೆ.

    ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್​ ಮತ್ತು ಲೋಕಮಾನ್ಯ ತಿಲಕ್​ ಟರ್ಮಿನಲ್​ ಫ್ಲಾಟ್​ಫಾರಂನ ಟಿಕೆಟ್​ ಬೆಲೆಯನ್ನು ಏರಿಸಲಾಗಿದೆ. ಇದು ಮೇ 9 ರಿಂದ ಮೇ 23ರವರೆಗೆ ಮಾತ್ರ ಅನ್ವಯಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಆದೇಶ ಹತ್ತಿರದ ಥಾಣೆ, ಕಲ್ಯಾಣ ಮತ್ತು ಪಲ್ವೇಲ್​ ನಿಲ್ದಾಣಕ್ಕೂ ಅನ್ವಯವಾಗಲಿದ್ದು, ಭಾರೀ ಜನನಿಬಿಡವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರಣ ತಿಳಿಸಿದೆ.

    ಅಲ್ಲದೇ ಹೆಚ್ಚಿನ ಜನರು ಒಮ್ಮೆಲೇ ಭೇಟಿ ನೀಡಿದಾಗ ಕೆಲವರು ಫ್ಲಾಟ್​ಫಾರಂ ಟಿಕೆಟ್​ ಇಲ್ಲದೇ ಪ್ರವೇಶಿಸುತ್ತಿದ್ದಾರೆ. ಈ ವರ್ಷದಲ್ಲೇ 93 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

    ಸಲ್ಮಾನ್​ ತದ್ರೂಪಿಯನ್ನು ಬಂಧಿಸಿದ ಪೊಲೀಸರು: ಕಾರಣ ಇಲ್ಲಿದೆ

    ಮತ್ತೊಂದು ದಾಖಲೆ: ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಸಿನಿಮಾ ಕೆಜಿಎಫ್​-2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts