ಮದ್ಯದ ಅಮಲಿನಲ್ಲಿ ತೇಲಾಡಿದ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್! ವಿಡಿಯೋ ವೈರಲ್​... Priya Prakash Varrier

Priya Prakash Varrier
Published on

Priya Prakash Varrier : ತಮ್ಮ ಕಣ್ಸನ್ನೆಯಿಂದ ರಾತ್ರೋರಾತ್ರಿ ಜನಪ್ರಿಯವಾದವರು ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಅವರ ಕಣ್ಸನ್ನೆ ಅದೆಷ್ಟು ಜನಪ್ರಿಯವಾಗಿತ್ತೆಂದರೆ, ಬರೀ ಮಲಯಾಳಂ ಚಿತ್ರರಂಗದಲ್ಲಷ್ಟೇ ಅಲ್ಲ, ಇಡೀ ದೇಶದಲ್ಲೇ ಸೆನ್ಸೇಶನ್ ಆಗಿಬಿಟ್ಟರು ಪ್ರಿಯಾ. ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಂಡರು.

ಅಂದಹಾಗೆ, ಪ್ರಿಯಾ ಪ್ರಕಾಶ್​ ವಾರಿಯರ್​ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ತಮ್ಮ ಮಾದಕ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ವಿಡಿಯೋವೊಂದರ ಕಾರಣಕ್ಕೆ ಪ್ರಿಯಾ ಪ್ರಕಾಶ್​ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಾದಕ ವಿಡಿಯೋವನ್ನು ಹಂಚಿಕೊಂಡಿಲ್ಲ ಬದಲಾಗಿ ಅವರೇ ಮದ್ಯದ ನಶೆಯಲ್ಲಿದ್ದಾರೆ.

ಏಪ್ರಿಲ್​ 10ರಂದು ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಟ ಅಜಿತ್ ಅಭಿನಯದ "ಗುಡ್ ಬ್ಯಾಡ್ ಅಗ್ಲಿ" ಚಿತ್ರದಲ್ಲಿ ಪ್ರಿಯಾ ಪ್ರಕಾಶ್,​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಪ್ರಿಯಾ, 90ರ ದಶಕದಲ್ಲಿ ಜಿಬಿಯು ಚಿತ್ರದಲ್ಲಿ ಸಿಮ್ರಾನ್ ಹಾಡಿದ್ದ "ತೊಟ್ಟು ತೊಟ್ಟು ಬೆಸುಮ್ ಸುಲ್ತಾನಾ" ಎಂಬ ಹಿಟ್ ಹಾಡಿಗೆ ನೃತ್ಯ ಮಾಡಿದ್ದಾರೆ. ನಟಿ ಸಿಮ್ರಾನ್ ಅವರ ನೃತ್ಯವನ್ನು ನಿಖರವಾಗಿ ಮರುಸೃಷ್ಟಿಸಿದ್ದಕ್ಕಾಗಿ ಪ್ರಿಯಾ ಅವರನ್ನು ಅನೇಕ ಅಭಿಮಾನಿಗಳು ಹೊಗಳುತ್ತಿದ್ದಾರೆ.

ಅನೇಕ ನೆಟ್ಟಿಗರು ಆ ಹಾಡನ್ನು ಎಡಿಟ್​ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೆ ಟ್ರೆಂಡಿಂಗ್ ಆಗಿದ್ದಾರೆ. ಇಂತಹ ಸಮಯದಲ್ಲಿ ನಟಿ ಪ್ರಿಯಾ ಪ್ರಕಾಶ್ ಕುಡಿದ ಮತ್ತಿನಲ್ಲಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋವನ್ನು ಆಕ್ಟ್ರೆಸ್​ಗ್ರಾಮ್​ ಹೆಸರಿನ ಇನ್​​ಸ್ಟಾಗ್ರಾಂ ಖಾತೆಯಲ್ಲಿ 3 ದಿನಗಳ ಹಿಂದೆ ಅಪ್​ಲೋಡ್​ ಮಾಡಲಾಗಿದ್ದು, ಈವರೆಗೂ 56 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಲೈಕ್​ ಮಾಡಿದ್ದಾರೆ. ವಿಡಿಯೋ ನೋಡಿದವರು ಪ್ರಿಯಾ ತುಂಬಾ ಕ್ಯೂಟ್​ ಆಗಿದ್ದಾರೆ. ಮತ್ತಿನಲ್ಲೂ ಮತ್ತೇರಿಸುವಂತಹ ಲುಕ್​ ನೀಡುತ್ತಿದ್ದಾರೆ ಎಂದೆಲ್ಲ ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net