ನಟಿ ಓವಿಯಾ ಬೆನ್ನಲ್ಲೇ ಖ್ಯಾತ ಟಿಕ್​ಟಾಕರ್​ ಖಾಸಗಿ ವಿಡಿಯೋ ಲೀಕ್​!? ಯುವಕನ ಜತೆಗಿರುವ ದೃಶ್ಯ ವೈರಲ್ | Minahil Malik

Minahil Malik
Published on

Minahil Malik : ಪಾಕಿಸ್ತಾನ ಮೂಲದ ಖ್ಯಾತ ಟಿಕ್​ಟಾಕರ್​ ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ ಮಿನಾಹಿಲ್ ಮಲಿಕ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿವೆ.

ಯುವಕನ ಜತೆ ರೊಮ್ಯಾಂಟಿಕ್​ ಆಗಿರುವ ಖಾಸಗಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಿನಾಹಿಲ್ ಮಲಿಕ್ ಅವರದ್ದು ಎಂದು ಹೇಳಲಾಗುತ್ತಿದೆ. ವಿಡಿಯೋ ಲೀಕ್​ ಆಗುತ್ತಿದ್ದಂತೆ ಮಿನಾಹಿಲ್ ಅವರು ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಕೆಲವರು ಟಿಕ್​ಟಾಕರ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರೆ, ಇನ್ನು ಕೆಲವರು ವೈಯಕ್ತಿಕ ವಿಚಾರಗಳನ್ನು ಈ ರೀತಿ ಸೋರಿಕೆ ಮಾಡಬಾರದು ಎಂದು ಮಿನಾಹಿಲ್ ಮಲಿಕ್ ಪರ ಬ್ಯಾಟ್​ ಬೀಸಿದ್ದಾರೆ.

ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಟಿಕ್​ಟಾಕ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಿನಾಹಿಲ್​ ಮಲಿಕ್​ ಸ್ಪಷ್ಟನೆ ನೀಡಿದ್ದಾರೆ. ಹರಿದಾಡುತ್ತಿರುವ ವಿಡಿಯೋ ಮಾರ್ಫ್ ವಿಡಿಯೋ ಆಗಿದೆ. ಅವುಗಳನ್ನು ಎಡಿಟ್​ ಮಾಡಿ ಹರಿಬಿಡಲಾಗಿದೆ. ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ಎಫ್‌ಐಎಗೆ ದೂರು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಲಾಗುವುದು. ಈ ಘಟನೆಯು ತನಗೆ ಮತ್ತು ತನ್ನ ಕುಟುಂಬಕ್ಕೆ ಅತೀವ ಮಾನಸಿಕ ಸಂಕಟ ತಂದಿದೆ ಎಂದು ವಿಡಿಯೋದಲ್ಲಿ ಮಿನಾಹಿಲ್​ ನೋವು ತೋಡಿಕೊಂಡಿದ್ದಾರೆ.

ಈಗ ಹರಿದಾಡುತ್ತಿರುವ ವಿಡಿಯೋಗಳು ಅವರ ವರ್ಚಸ್ಸು ಹಾಳು ಮಾಡುವ ಷಡ್ಯಂತ್ರದ ಭಾಗವಾಗಿದೆ. ಎಲ್ಲವನ್ನೂ ಎಡಿಟ್ ಮಾಡಿ ಸೇರಿಸಿದ್ದಾರೆ ಎಂದು ಮಿನಾಹಿಲ್​ ಹೇಳಿದ್ದಾರೆ. ಅಂದಹಾಗೆ ಮಿನಾಯಿಲ್, ಟಿಕ್​ಟಾಕ್‌ನಲ್ಲಿ ಹಲವಾರು ಅನುಯಾಯಿಗಳನ್ನು ಹೊಂದಿರುವ ಪಾಕಿಸ್ತಾನದ ಸಾಮಾಜಿಕ ಜಾಲತಾಣದ ಸ್ಟಾರ್​. ಇನ್​ಸ್ಟಾಗ್ರಾಂನಲ್ಲಿ 1.8 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಮಿನಾಹಿಲ್​ ದೂರಿನ ಮೇರೆಗೆ ಎಫ್‌ಐಎ ತನಿಖೆ ಆರಂಭಿಸಿದೆ.

ಓವಿಯಾ ಲೀಕ್ಡ್​ ( Oviya Leaked ) ಹ್ಯಾಶ್​ಟ್ಯಾಗ್​ ಹೆಸರಲ್ಲಿ ಕೆಲ ದಿನಗಳ ಹಿಂದೆ ನಟಿ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸುದ್ದಿ ಭಾರಿ ಚರ್ಚೆಯಾಗಿತ್ತು. ಈ ಬಗ್ಗೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಓವಿಯಾ ಕೊಟ್ಟ ಉತ್ತರವೂ ಕೂಡ ಶಾಕ್​ ಆಗಿತ್ತು. ಯಾವಾಗ ವಿಡಿಯೋಗಳು ಹೆಚ್ಚು ಹರಿದಾಡಿತೋ ಆಗ ದೂರು ಸಹ ದಾಖಲಿಸಿದ್ದಾರೆ. ಅಲ್ಲದೆ, ಇದರ ಹಿಂದೆ ಮಾಜಿ ಸ್ನೇಹಿತನಮ ಕೈವಾಡ ಇದೆ ಎಂತಲೂ ಆರೋಪಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net