ಮೂರು ತಿಂಗಳ ನಂತರ ತವರಿಗೆ ವಾಪಸ್ಸಾದ ಮಲಯಾಳಂ ಸ್ಟಾರ್​ ಪೃಥ್ವಿರಾಜ್​ !

Prithviraj Final
Published on

ಲಾಕ್‌ಡೌನ್‌ನಿಂದ ಜೋರ್ಡಾನ್‌ನಲ್ಲಿ ಸಿಲುಕಿದ್ದ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಕೊನೆಗೂ ಶುಕ್ರವಾರ ಕೇರಳಕ್ಕೆ ವಾಪಸ್ಸಾಗಿದ್ದಾರೆ. ಅಷ್ಟೇ ಅಲ್ಲ, 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಪೃಥ್ವಿರಾಜ್ ಸೇರಿದಂತೆ 58 ಜನರ ತಂಡ, ‘ಆಡುಜೀವಿತಂ’ ಎನ್ನುವ ಮಲಯಾಳಂ ಚಿತ್ರದ ಚಿತ್ರೀಕರಣಕ್ಕೆಂದು ಜೋರ್ಡಾನ್‌ಗೆ ಹೋಗಿತ್ತು. ಅಲ್ಲಿ ಚಿತ್ರೀಕರಣ ನಡೆಸುವಾಗಲೇ, ಕರೊನಾದಿಂದ ಲಾಕ್‌ಡೌನ್ಷ ಘೋಣೆಯಾಗಿತ್ತು. ಎಲ್ಲಾ ಕಡೆ ಲಾಕ್‌ಡೌನ್ ಇದ್ದುದರಿಂದ, ಪೃಥ್ವಿರಾಜ್ ಮತ್ತು ತಂಡ ವಾಪಸ್ಸು ಸ್ವದೇಶಕ್ಕೆ ಮರಳಾಗಲಿಲ್ಲ.

ಚಿತ್ರತಂಡವನ್ನು ವಾಪಸ್ಸು ಕರೆಸಿಕೊಳ್ಳಬೇಕು ಎಂದು ಮಲಯಾಳಂ ಚಿತ್ರರಂಗದ ಹಲವರು ಮತ್ತು ಪೃಥ್ವಿರಾಜ್ ಅವರ ಅಭಿಮಾನಿಗಳು ಆಗ್ರಹಿಸಿದ್ದರು. ಆದರೆ, ಪೃಥ್ವಿರಾಜ್ ಮತ್ತು ತಂಡವನ್ನು ವಾಪಸ್ಸು ಕರೆಸಿಕೊಳ್ಳುವುದಕ್ಕೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈಗ ಲಾಕ್‌ಡೌನ್ ಸ್ವಲ್ಪ ತೆರವಾಗಿ, ವಿಮಾನಯಾನ ಪುನಃ ಪ್ರಾರಂಭವಾಗಿರುವುದರಿಂದ, ಪೃಥ್ವಿರಾಜ್ ಮತ್ತು ತಂಡ ಸ್ವದೇಶಕ್ಕೆ ವಾಪಸ್ಸು ಬರುವಂತಾಗಿದೆ.

ಪೃಥ್ವಿರಾಜ್ ವಾಪಸ್ಸಾದ ಬಗ್ಗೆ ಅವರ ಪತ್ನಿ ಸುಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ‘ಮೂರು ತಿಂಗಳ ನಂತರ ಪೃಥ್ವಿರಾಜ್ ಮತ್ತು ‘ಆಡುಜೀವಿತಂ’ ಚಿತ್ರತಂಡದವರು ವಾಪಸ್ಸು ಬಂದಿದ್ದಾರೆ. ನಿಯಮಗಳ ಪ್ರಕಾರ ಎಲ್ಲರೂ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಅವರೆಲ್ಲರೂ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳುವುದಕ್ಕೆ ಸಹಕರಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಸುಪ್ರಿಯಾ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net