ಶ್ರೀವಲ್ಲಿ ರಶ್ಮಿಕಾ: ಹೊರಬಿತ್ತು ನಟಿಯ 'ಪುಷ್ಪ' ಚಿತ್ರದ ಲುಕ್​

rashmika
Published on

ಸೌತ್​ನಲ್ಲಿ ಸದ್ಯ ಸಖತ್​ ಸದ್ದು ಮಾಡುತ್ತಿರುವ ಸಿನಿಮಾಗಳಲ್ಲಿ ಅಲ್ಲು ಅರ್ಜುನ್​ ಅಭಿನಯದ "ಪುಷ್ಪ' ಚಿತ್ರವೂ ಒಂದು. ಈಗಾಗಲೇ ಹಾಡು, ಟೀಸರ್​ ಮೂಲಕವೇ ನಿರೀೆ ದುಪ್ಪಟ್ಟು ಮಾಡಿರುವ ಚಿತ್ರತಂಡ, ಇದೀಗ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಲುಕ್​ ರಿಲೀಸ್​ ಮಾಡಿ, ಅಭಿಮಾನಿಗಳಿಗೆ ಸರ್ಪೆಸ್​ ನೀಡಿದೆ.

ಸುಕುಮಾರ್​ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಶ್ರೀವಲ್ಲಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಶೇಷ ೋಟೋವೊಂದನ್ನು ಜಾಲತಾಣದಲ್ಲಿ ಹರಿಬಿಟ್ಟಿರುವ ತಂಡ, ಪುಷ್ಪರಾಜನ ಮನದರಸಿ ಎಂದು ಪರಿಚಯಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸಿದ್ಧವಾಗಿರುವ ಈ ಚಿತ್ರ ಕ್ರಿಸ್​ಮಸ್​ಗೆ ಬಿಡುಗಡೆ ಆಗುತ್ತಿದೆ. ಹಾದ್​ ಾಸಿಲ್​, ಡಾಲಿ ಧನಂಜಯ ಸೇರಿ ಹಲವರು ಈ ಚಿತ್ರದಲ್ಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಚಿತ್ರ ನಿಮಿರ್ಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net