ಮದುವೆ ವಿಡಿಯೋ ಬಳಿಕ, ಇದೀಗ ಮೊದಲ ರಾತ್ರಿಯ ವಿಡಿಯೋ: ವೈರಲ್​ ವಿವಾಹಕ್ಕೆ ಬಿಗ್​ ಟ್ವಿಸ್ಟ್​ ಕೊಟ್ಟ ನಟಿ! Prarthana krishnan

Prarthana krishnan
Published on

Prarthana krishnan : ಮಲಯಾಳಂ ಧಾರಾವಾಹಿ ನಟಿ ಪ್ರಾರ್ಥನಾ ಕೃಷ್ಣನ್​ ಮತ್ತು ಅವರ ಸ್ನೇಹಿತೆ ಮತ್ತು ಮಾಡೆಲ್ ಅನ್ಸಿಯಾ ನಡುವಿನ ವಿವಾಹದ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಅಲ್ಲದೆ, ಭಾರಿ ಚರ್ಚೆ ಕೂಡ ನಡೆದಿತ್ತು. ಇದೀಗ ಇಬ್ಬರು ತಮ್ಮ ಮದುವೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

‘ಕೂಡೆವಿದೆ’ ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದ ನಟಿ ಪ್ರಾರ್ಥನಾ ಅವರೊಂದಿಗೆ ಹೂವಿನ ಹಾರ ಧರಿಸಿರುವ ಚಿತ್ರಗಳನ್ನು ಅನ್ಸಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ವಿತ್ ಮಾ ಪೊಂಡಟ್ಟಿ ( ನನ್ನ ಹೆಂಡತಿಯ ಜೊತೆ) ಎಂಬ ಶೀರ್ಷಿಕೆ ನೀಡಿದ್ದರು. ಪ್ರಾರ್ಥನಾ ಕೂಡ ಫೋಟೋಗಳನ್ನು ಹಂಚಿಕೊಂಡಿದ್ದರು.

ದೇವಸ್ಥಾನದಲ್ಲಿ ಇಬ್ಬರ ಮದುವೆ ನಡೆಯುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಕೂಡ ಅನ್ಸಿಯಾ ಹಾಗೂ ಪ್ರಾರ್ಥನಾ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಇಬ್ಬರು ಪರಸ್ಪರ ಮಾಲೆಗಳನ್ನು ಧರಿಸಿ ಸಿಂದೂರ ಹಚ್ಚಿಕೊಳ್ಳುವುದನ್ನು ಕಾಣಬಹುದು. ವಿಡಿಯೋ ಮೇಲೆ ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾಗಿದ್ದೇನೆ. ಇದು ವಿಷಕಾರಿ ಸಂಬಂಧಕ್ಕಿಂತ ನೂರು ಪಟ್ಟು ಉತ್ತಮವಾದ ಸಂಬಂಧ ಎಂದು ಇಬ್ಬರು ಬರೆದುಕೊಂಡಿದ್ದರು. ಅಲ್ಲದೆ, ಎಲ್ಲ ಹುಡುಗಿಯರು ನಿಮ್ಮ ಆಟಿಕೆಗಳಲ್ಲ, ವಿಷಕಾರಿ ಹಾಗೂ ನಕಲಿ ನಾಟಕೀಯ ಜನರಿಂದ ದೂರ ಸರಿಯಿರಿ ಎಂದು ಬರೆದುಕೊಂಡಿದ್ದರು.

ವಿಡಿಯೋ ನೋಡಿದ ಅನೇಕರು ಇಬ್ಬರನ್ನು ಅಭಿನಂದಿಸಿ, ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದರು. ಕೆಲವರು ಪೋಸ್ಟ್ ಅಡಿಯಲ್ಲಿ ಮದುವೆಯ ಶುಭಾಶಯಗಳನ್ನು ಸಹ ವ್ಯಕ್ತಪಡಿಸಿದರು. ಆದಾಗ್ಯೂ, ಇದು ಶೂಟಿಂಗ್‌ನ ಭಾಗವೋ? ತಮಾಷೆಯ ವಿಡಿಯೊವೋ? ಅಥವಾ ನಿಜವಾಗಿಯೂ ಮದುವೆಯಾಗಿದ್ದಾರಾ ಎಂಬುದು ಸ್ಪಷ್ಟವಾಗಿರಲಿಲ್ಲ. ಈ ಬಗ್ಗೆ ಸ್ವತಃ ಅನ್ಸಿಯಾ ಮತ್ತು ಪ್ರಾರ್ಥನಾ ಅವರೇ ಸ್ಪಷ್ಟನೆ ನೀಡಬೇಕಿದೆ ಎಂದು ನೆಟ್ಟಿಗರು ಆಗ್ರಹಿಸಿದ್ದರು.

ಕೊನೆಗೂ ಸ್ಪಷ್ಟನೆ ನೀಡಿದ ಪ್ರಾರ್ಥನಾ ಮತ್ತು ಅನ್ಸಿಯಾ

ಮದುವೆಯಾಗುವಂತೆ ನಟಿಸಿ ರೀಲ್ ವಿಡಿಯೋವನ್ನು ವೈರಲ್ ಮಾಡಲು ಬಯಸಿದ್ದೆವು ಎಂದು ಪ್ರಾರ್ಥನಾ ಹೇಳಿದರೆ, ನಿರೀಕ್ಷೆಯಂತೆ, ನಮ್ಮ ವಿಡಿಯೋ ಅಡಿಯಲ್ಲಿ ಹೆಚ್ಚು ನೆಗೆಟಿವ್ ಕಾಮೆಂಟ್‌ಗಳು ಬಂದಿಲ್ಲ ಎಂದು ಅನ್ಸಿಯಾ ಹೇಳಿದ್ದಾರೆ. ತೆಲುಗು ಧಾರಾವಾಹಿಯ ಇಬ್ಬರು ಕಲಾವಿದರು ಮಾಡಿದ ರೀಲ್ ಅನ್ನು ನಾನು ನೋಡಿದೆ. ಅದನ್ನು ಮರುಸೃಷ್ಟಿಸಿ ಪ್ರಯತ್ನಿಸಬೇಕೆಂದು ಭಾವಿಸಿದೆ. ನಮ್ಮ ಮಲಯಾಳಿ ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸುತ್ತಾರೆಂದು ನೋಡಲು ನಾನು ಅದನ್ನು ಮಾಡಿದೆ. ನೀವೆಲ್ಲ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ನೋಡಲು ನಾನು ಅದನ್ನು ಮಾಡಿದೆ. ಆದರೆ, ಎಲ್ಲರೂ ತುಂಬಾ ಬೆಂಬಲ ನೀಡಿದರು. ನಮಗೆ ತುಂಬಾ ಒಳ್ಳೆಯ ಕಾಮೆಂಟ್‌ಗಳು ಬಂದವು. ಅದು ನಮ್ಮ ಧೈರ್ಯ. ಅದಕ್ಕಾಗಿಯೇ ನಾವು ಇನ್ನೂ ಸತ್ಯವನ್ನು ಬಹಿರಂಗಪಡಿಸಿಲ್ಲ. ನಾವು ಇತ್ತೀಚೆಗೆ ಮೊದಲ ರಾತ್ರಿ ವಿಡಿಯೋ ಮಾಡಿದ್ದೇವೆ. ನಿಜಕ್ಕೂ ಇದು ಆಶ್ಚರ್ಯಕರವಾಗಿದೆ ಎಂದು ಪ್ರಾರ್ಥನಾ ಮತ್ತು ಅನ್ಸಿಯಾ ಹೇಳುತ್ತಾರೆ.

ತಾವಿಬ್ಬರೂ ಒಳ್ಳೆಯ ಸ್ನೇಹಿತರು ಮತ್ತು ಅನ್ಸಿ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಅನ್ಸಿಗೂ ಒಂದು ಮಗು ಇದೆ. ವಿಡಿಯೋದಲ್ಲಿರುವ ಮಗು ಅನ್ಸಿಯ ಮಗು ಎಂದು ಇದೇ ಸಂದರ್ಭದಲ್ಲಿ ಪ್ರಾರ್ಥನಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net