ನಾನು ನನ್ನ ಸ್ನೇಹಿತೆಯನ್ನೇ ಮದುವೆಯಾದೆ: ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ನಟಿಯ ಫೋಟೋಗಳು! Prarthana krishnan

Prarthana krishnan
Published on

Prarthana krishnan : ಮಲಯಾಳಂ ನಟಿ ಪ್ರಾರ್ಥನಾ ಕೃಷ್ಣನ್​ ಹಾಗೂ ಮಾಡೆಲ್​ ಅನ್ಸಿಯಾ ಅನ್ಸಿ ಹಂಚಿಕೊಂಡಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

'ಕೂಡೆವಿದೆ' ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದ ನಟಿ ಪ್ರಾರ್ಥನಾ ಅವರೊಂದಿಗೆ ಹೂವಿನ ಹಾರ ಧರಿಸಿರುವ ಚಿತ್ರಗಳನ್ನು ಅನ್ಸಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 'ವಿತ್ ಮಾ ಪೊಂಡಟ್ಟಿ' ಎಂಬ ಶೀರ್ಷಿಕೆ ನೀಡಿದ್ದಾರೆ.

ಫೋಟೋಗಳನ್ನು ನೋಡಿದ ನೆಟ್ಟಿಗರು, ಏನಾಯಿತು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದರ ನಡುವೆ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಕೂಡ ಅನ್ಸಿಯಾ ಹಾಗೂ ಪ್ರಾರ್ಥನಾ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಪರಸ್ಪರ ಮಾಲೆಗಳನ್ನು ಧರಿಸಿ ಸಿಂಧೂರ ಹಚ್ಚಿಕೊಳ್ಳುವುದನ್ನು ಕಾಣಬಹುದು.

ವಿಡಿಯೋ ಮೇಲೆ ನಾನು ನನ್ನ ಆತ್ಮೀಯ ಸ್ನೇಹಿತೆಯನ್ನು ಮದುವೆಯಾಗಿದ್ದೇನೆ. ಇದು ವಿಷಕಾರಿ ಸಂಬಂಧಕ್ಕಿಂತ ನೂರು ಪಟ್ಟು ಉತ್ತಮವಾದ ಸಂಬಂಧ ಎಂದು ಇಬ್ಬರು ಬರೆದುಕೊಂಡಿದ್ದಾರೆ. ಅಲ್ಲದೆ, ಎಲ್ಲ ಹುಡುಗಿಯರು ನಿಮ್ಮ ಆಟಿಕೆಗಳಲ್ಲ, ವಿಷಕಾರಿ ಹಾಗೂ ನಕಲಿ ನಾಟಕೀಯ ಜನರಿಂದ ದೂರ ಸರಿಯಿರಿ ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿದ ಅನೇಕರು ಇಬ್ಬರನ್ನು ಅಭಿನಂದಿಸಿ, ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಕೆಲವರು ಪೋಸ್ಟ್ ಅಡಿಯಲ್ಲಿ ಮದುವೆಯ ಶುಭಾಶಯಗಳನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ, ಇದು ಶೂಟಿಂಗ್‌ನ ಭಾಗವೋ? ತಮಾಷೆಯ ವಿಡಿಯೊವೋ? ಅಥವಾ ನಿಜವಾಗಿಯೂ ಮದುವೆಯಾಗಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸ್ವತಃ ಅನ್ಸಿಯಾ ಮತ್ತು ಪ್ರಾರ್ಥನಾ ಅವರೇ ಸ್ಪಷ್ಟನೆ ನೀಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net