ಪ್ರಣಂ ಸನ್ ಆಫ್​ ಮುತ್ತಣ್ಣ; ಸೆಟ್ಟೇರಿತು ಪ್ರಣಂ ದೇವರಾಜ್ ಹೊಸ ಸಿನಿಮಾ

son-of-muttanna
Published on

ಬೆಂಗಳೂರು: ದೇವರಾಜ್ ದ್ವಿತೀಯ ಪುತ್ರ ಪ್ರಣಂ ದೇವರಾಜ್ ‘ಕುಮಾರಿ 21 ಎ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪದಾರ್ಪಣೆ ಮಾಡಿದ್ದರು. ನಂತರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ವೈರಂ’ ಚಿತ್ರದಲ್ಲಿ ನಟಿಸಿದ್ದು, ಅದು ರಿಲೀಸ್‌ಗೆ ರೆಡಿಯಿದೆ. ಅದರ ಬೆನ್ನಲ್ಲೇ ಅವರು ನಾಯಕನಾಗಿ ನಟಿಸಲಿರುವ ‘ಸನ್ ಆ್ ಮುತ್ತಣ್ಣ’ ಸಿನಿಮಾ ಸೆಟ್ಟೇರಿದೆ.

ಇತ್ತೀಚೆಗಷ್ಟೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ದೇವರಾಜ್ ಮತ್ತು ಚಂದ್ರಲೇಖಾ ದಂಪತಿ ಆಗಮಿಸಿ ಮಗನ ಚಿತ್ರಕ್ಕೆ ಶುಭಹಾರೈಸಿದ್ದಾರೆ. ‘ಸನ್ ಆ್ ಮುತ್ತಣ್ಣ’ನಿಗೆ ನಿರ್ದೇಶಕ ಆರ್.ಚಂದ್ರು ಮತ್ತು ಪ್ರೇಮ್ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಶ್ರೀಕಾಂತ್ ಹುಣ್ಸೂರ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಪ್ರಣಂ ದೇವರಾಜ್ ಜತೆ ಚಿತ್ರದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಪ್ರಮುಖ ತಾರಾಗಣದಲ್ಲಿದ್ದಾರೆ.

ಶೀರ್ಷಿಕೆಯೇ ಹೇಳುವಂತೆ ಇದು ಅಪ್ಪ-ಮಗನ ನಡುವಿನ ಬಾಂಧವ್ಯದ ಕಥೆಯಾಗಿದ್ದು, ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net