ಜಲಪಾತದಲ್ಲಿ ಪ್ರಮೋದ್ ಶೆಟ್ಟಿ ಲುಕ್ ರಿವೀಲ್

jalapata
Published on

ಬೆಂಗಳೂರು: ರಮೇಶ್ ಬೇಗಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪರಿಸರ ಕಾಳಜಿ ಕುರಿತಾದ ಸಿನಿಮಾ ‘ಜಲಪಾತ’. ನಾಗಶ್ರೀ ಬೇಗಾರ್ ಚಿತ್ರದ ನಾಯಕಿಯಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.

ಈಗ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಪ್ರಮೋದ್ ಶೆಟ್ಟಿ ಲುಕ್ ರಿವೀಲ್ ಮಾಡಲಾಗಿದೆ. ಪೋಸ್ಟರ್ ರಿಲೀಸ್ ಮಾಡಿದ ಪ್ರಮೋದ್ ಪತ್ನಿ ಸುಪ್ರೀತಾ, ‘ರಮೇಶ್ ಬೇಗಾರ್ ಅವರ ಜತೆಗೆ ಇದು ಪ್ರಮೋದ್ ಅವರ ಎರಡನೇ ಪ್ರಾಜೆಕ್ಟ್. ವಿಭಿನ್ನ ಕಥೆಯಲ್ಲಿ ಪ್ರಮೋದ್ ಲುಕ್ ಭರ್ಜರಿಯಾಗಿದೆ’ ಎಂದಿದ್ದಾರೆ.

ಚಿತ್ರಕ್ಕೆ ಸಾದ್ವಿನಿಕೊಪ್ಪ ಸಂಗೀತ, ಶಶೀರ ಛಾಯಾಗ್ರಹಣ, ಅವಿನಾಶ್ ಸಂಕಲನವಿರಲಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರ ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net