'ಸನ್ನಿಧಾನ'ಕ್ಕೆ ಹೊರಟ ಪ್ರಮೋದ್​ ಶೆಟ್ಟಿ-ಯೋಗಿ ಬಾಬು

Yogi Babu - Pramod Shetty
Published on

ಬೆಂಗಳೂರು: 'ತೂತು ಮಡಿಕೆ' ಚಿತ್ರದ ನಿರ್ಮಾಪಕರಾದ ಮಧುಸೂಧನ್​ ರಾವ್​, ಅದೇ ಚಿತ್ರದ ನಾಯಕ ಕಂ ನಿರ್ದೇಶಕ ಚಂದ್ರಕೀರ್ತಿ ನೇತೃತ್ವದಲ್ಲಿ ಇನ್ನೊಂದು ಹೊಸ ಸಿನಿಮಾ ಘೋಷಿಸಿದ್ದರು. ಆ ಚಿತ್ರ ಶುರುವಾಗುವ ಮುನ್ನವೇ ಅವರು, ಪ್ಯಾನ್​ ಇಂಡಿಯಾ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ.

ಮಧುಸೂಧನ್​ ರಾವ್​ ಈ ಬಾರಿ ಕೈಗಿತ್ತಿಕೊಂಡಿರುವ ಚಿತ್ರಕ್ಕೆ ‘ಸನ್ನಿದಾನ ಪಿ.ಒ’ ಎಂದು ಶೀರ್ಷಿಕೆ ಇಡಲಾಗಿದ್ದು ಜನವರಿ 14 ಸಂಕ್ರಾಂತಿಯಂದು ಸಿನಿಮಾ ಶಬರಿ ಮಲೆಯ ಸನ್ನಿದಾನದಲ್ಲಿ ಸೆಟ್ಟೇರಲಿದೆ.

‘ಸನ್ನಿದಾನ ಪಿ.ಒ’ ಚಿತ್ರವು ಒಂದು ದೈವಿಕ ಪ್ರೇಮಕಥೆಯಾಗಿದ್ದು, ಮಲಯಾಳಂ ನಿರ್ದೇಶಕ ರಾಜೀವ್ ವೈದ್ಯ ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ತಮಿಳಿನ ಖ್ಯಾತ ನಟ ಯೋಗಿ ಬಾಬು, ಮತ್ತು ಕನ್ನಡದ ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಸದ್ಯದಲ್ಲೇ ಚಿತ್ರದ ತಾರಾ ಬಳಗ ಮತ್ತು ತಾಂತ್ರಿಕ ವರ್ಗದ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆಯಂತೆ.

ಸರ್ವತ ಸಿನಿ ಗ್ಯಾರೇಜ್ ಮತ್ತು ಶಿವಮೊಗ್ಗ ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಿರ್ಮಾಣದಲ್ಲಿ ಮಧುಸೂಧನ್ ರಾವ್ ಜತೆಗೆ ಶಬೀರ್ ಪಠಾಣ್​ ಸಹ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ವಿನೋಧ್ ಭಾರತಿ ಛಾಯಾಗ್ರಹಣ ಮತ್ತು ಸುರೇಶ್​ ಅರಸ್​ ಅವರ ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net