

Prakash Raj : ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ದೇಶದಲ್ಲಿರುವ ಪಾಕಿಸ್ತಾನಿ ಜನರನ್ನು ಈಗಾಗಲೇ ಅವರ ತಾಯ್ನಾಡಿಗೆ ಹೊರಹಾಕಿದೆ. ಸಿಂಧೂ ನದಿಯಿಂದ ನೀರು ಹರಿಯುವುದನ್ನು ನಿಲ್ಲಿಸಿದೆ. ಪಾಕಿಸ್ತಾನಿ ಸೆಲೆಬ್ರಿಟಿಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ಸ್ಥಗಿತಗೊಳಿಸಿದೆ. ಪಾಕಿಸ್ತಾನಿ ನಟರು ಮತ್ತು ಅವರ ಚಲನಚಿತ್ರಗಳನ್ನು ಸಹ ನಿಷೇಧಿಸಿದೆ.
ಪಾಕಿಸ್ತಾನಿ ನಟ ಫವಾದ್ ಖಾನ್ ಅವರ ಅಬೀರ್ ಗುಲಾಲ್ ಚಿತ್ರ ಬಿಡುಗಡೆಯನ್ನು ಚಲನಚಿತ್ರಗಳ ನಿಷೇಧದಿಂದಾಗಿ ನಿಲ್ಲಿಸಲಾಗಿದೆ. ಆದರೆ, ಈ ಕ್ರಮವನ್ನು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ. ದಿ ಲಲಾಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರಕಾಶ್ ರಾಜ್, ನಾನು ಚಲನಚಿತ್ರಗಳನ್ನು ನಿಷೇಧಿಸುವುದನ್ನು ಬೆಂಬಲಿಸುವುದಿಲ್ಲ. ಅವು ಯಾವ ರೀತಿಯ ಚಲನಚಿತ್ರ ಎಂಬುದು ಮುಖ್ಯವಲ್ಲ. ಅವುಗಳನ್ನು ಜನರ ನಿರ್ಧಾರಕ್ಕೆ ಬಿಡಬೇಕು. ಸ್ಪಷ್ಟ ಅಶ್ಲೀಲತೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಒಳಗೊಂಡಿರುವ ಚಲನಚಿತ್ರಗಳನ್ನು ಹೊರತುಪಡಿಸಿ, ಯಾವುದನ್ನೂ ನಿಷೇಧಿಸಬಾರದು ಎಂದು ಹೇಳಿದರು.
ಪಾಕಿಸ್ತಾನಿ ನಟನ ಚಲನಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ನಟ ಪ್ರಕಾಶ್ ರಾಜ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದು ಭಾರತದ ಗೌರವದ ಪ್ರಶ್ನೆ ಎಂದು ಕಿಡಿಕಾರುತ್ತಿದ್ದಾರೆ.
ಅಂದಹಾಗೆ, ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವ ಅಬೀರ್ ಗುಲಾಲ್ ಚಿತ್ರದಲ್ಲಿ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಆರತಿ ಎಸ್. ಬಾಗ್ದಿ ನಿರ್ದೇಶಿಸಿದ ಈ ಚಿತ್ರವನ್ನು ವಿವೇಕ್ ಅಗರ್ವಾಲ್ ನಿರ್ಮಿಸಿದ್ದಾರೆ. ಈ ಚಿತ್ರ ಮೇ 9ಕ್ಕೆ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಕೇಂದ್ರವು ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನಿ ನಟ ಫವಾದ್ ನಟಿಸಿರುವ ಅಬೀರ್ ಗುಲಾಲ್ ಚಿತ್ರದ ಮೇಲೆ ನಿಷೇಧ ಹೇರಲಾಗಿದೆ. (ಏಜೆನ್ಸೀಸ್)