ಡಬ್ಬಿಂಗ್ ಮುಗಿಸಿದ 'ಅರ್ಜುನ್ ಗೌಡ' ... ಬಿಡುಗಡೆ ಯಾವಾಗ?

Arjun Gowda - Final
Published on

ಬೆಂಗಳೂರು: ಪ್ರಜ್ವಲ್​ ಅಭಿನಯದ 'ಅರ್ಜುನ್​ ಗೌಡ' ಚಿತ್ರವು ಏಪ್ರಿಲ್​ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಕೆಲಸಗಳೆಲ್ಲಾ ನಿಧಾನವಾದವು.

ಇದೀಗ 'ಅರ್ಜುನ್​ ಗೌಡ' ಚಿತ್ರದ ಚಿತ್ರೀಕರಣ ಮುಗಿಯುವುದರ ಜತೆಗೆ ಡಬ್ಬಿಂಗ್​ ಸಹ ಮುಗಿದಿದೆ. ಇನ್ನೇನು ಸದ್ಯದಲ್ಲೇ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಂಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ. ನಿಗದಿತ ಸಮಯ ನೋಡಿಕೊಂಡು ಚಿತ್ರ ಬಿಡುಗಡೆ ಮಾಡುವ ಆಶಯ ನಿರ್ಮಾಪಕರದು.

ಅಂದಹಾಗೆ, 'ಅರ್ಜುನ್​ ಗೌಡ' ಚಿತ್ರಕ್ಕೂ ತೆಲುಗಿನ 'ಅರ್ಜುನ್​ ರೆಡ್ಡಿ' ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಆಕ್ಷನ್​ ಲವ್​ಸ್ಟೋರಿಯಾಗಿದ್ದು, ಈ ಹಿಂದೆ '90' ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಲಕ್ಕಿ ಶಂಕರ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಹಿರಿಯ ನಿರ್ಮಾಪಕ ರಾಮು ಅವರು ಈ ಚಿತ್ರವನ್ನು ತಮ್ಮ ರಾಮು ಫಿಲಂಸ್​ ಬ್ಯಾನರ್​ನಡಿ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ್ ಅಭಿನಯಿಸಿದ್ದಾರೆ. ಬಾಲಿವುಡ್​​ನ ರಾಹುಲ್ ದೇವ್, 'ಸ್ಪರ್ಶ' ರೇಖ, ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ದೀಪಕ್ ಶೆಟ್ಟಿ, ದಿನೇಶ್ ಮಂಗಳೂರು, ಶೋಭಿತ್, ಜೀವನ್, ಹನುಮಂತೇಗೌಡ, ಮೋಹನ್ ಜನೇಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣವಿದೆ.

ಈಗಾಗಲೇ ಈ ಚಿತ್ರದ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದ ಯಶಸ್ವಿಯಾಗಿದೆ. ಸದ್ಯದಲ್ಲೇ ಮೇಕಿಂಗ್ ಟ್ರೇಲರ್ ಸಹ ಬಿಡುಗಡೆಗೊಳಿಸುವುದಾಗಿ ಚಿತ್ರತಂಡದವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net