More

    ‘ಡಾರ್ಕ್​ ಫ್ಯಾಂಟಸಿ’ ಮೂಲಕ ವಾಪಸ್ಸಾದ ಬಾಲರಾಜ್​!

    ಬೆಂಗಳೂರು: 80ರ ದಶಕದಲ್ಲಿ ಚಿತ್ರರಂಗಕ್ಕೆ ಬಂದು ಶಿವರಾಜಕುಮಾರ್​ ಅಭಿನಯದ ಹಲವು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ‘ರುದ್ರತಾಂಡವ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸಿದರು. ಬಹಳ ದಿನಗಳ ನಂತರ ‘ಡಾರ್ಕ್ ಫ್ಯಾಂಟಸಿ’ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವುದರ ಮೂಲಕ ಅವರು ನಟನಾಗಿ ರೀಎಂಟ್ರಿ ಕೊಟ್ಟಿದ್ದಾರೆ.

    ಇದನ್ನೂ ಓದಿ: ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟ ಡಾ ರಾಜ್​ ಕುಟುಂಬದ ಧ್ರುವನ್​ …

    ರಾಘವೇಂದ್ರ ರಾಜಕುಮಾರ್ ನಟನೆಯ ‘ಆಡಿಸಿದಾತ’ ಚಿತ್ರವನ್ನು ನಿರ್ದೇಶಿಸಿದ್ದ ಫಣೀಶ್ ಭಾರಧ್ವಾಜ್ ಈಗ ‘ಡಾರ್ಕ್​ ಫ್ಯಾಂಟಸಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀ ಲಕ್ಷ್ಮೀ ವೆಂಕಟೇಶ್ವರ ನಿಡುಮಾಮಿಡೇಶ್ವರಿ ವೈಶ್ಣೋದೇವಿ ಸಿನಿ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

    ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರವಾಗಿದ್ದು, ಇದರ ಫಸ್ಟ್​ಲುಕ್​ ಮತ್ತು ಟೀಸರ್​ ಬಿಡುಗಡೆಯಾಗಿದೆ. ಹಣದ ಸುತ್ತ ನಡೆಯುವ ಕಥೆ ಇದಾಗಿದ್ದು, ನಾಯಕಿಯು ಕಾರಣಾಂತರಗಳಿಂದ ಒಂದು ಕತ್ತಲ ಬಂಗಲೆಯಲ್ಲಿ ಸಿಲುಕಿರುತ್ತಾಳೆ. ಹೊರಗೆ ಆಕೆಯ ಪ್ರಿಯಕರ ಪರಿತಪಿಸುತ್ತಿರುತ್ತಾನೆ. ಬದುಕಲ್ಲಿ ಸೆಟ್ಲ್​​ ಆಗಬೇಕು ಎಂದು ಬಯಸುವ ನಾಯಕ, ಬೆಟ್ಟಿಂಗ್​ನಿಂದ ಹಣ ಮಾಡಲು ನಿಂತ ಮತ್ತೊಬ್ಬ … ಹೀಗೆ ಹಲವು ವಿಭಿನ್ನ ಪಾತ್ರಗಳು ಒಂದು ಕಡೆ ಸೇರುತ್ತವೆ. ಆ ನಂತರ ಮುಂದೇನಾಗುತ್ತದೆ ಎಂಬುದೇ ಚಿತ್ರದ ಕಥೆ.

    ನಟನೆಗೆ ವಾಪಸ್ಸಾಗಿರುವ ಕುರಿತು ಮಾತನಾಡುವ ಬಾಲರಾಜ್​, ‘ನಾನು ಚಿತ್ರರಂಗಕ್ಕೆ ಬರಲು ಇಬ್ಬರು ಕಾರಣಕರ್ತರು. ಹೊನ್ನವಳ್ಳಿ ಕೃಷ್ಣ ಮತ್ತು ಎಸ್.ಎ. ಗೋವಿಂದರಾಜ್. ಮದರಾಸಲ್ಲಿದ್ದ ನನ್ನನ್ನು ಬೆಂಗಳೂರಿಗೆ ಕರೆತಂದು, ಧ್ವನಿಮುದ್ರಣ ತಂತ್ರಜ್ಞನ ಕೆಲಸ ನೀಡಿದ್ದರು. ಆ ನಂತರ ನಾನು ಕಲಾವಿದನಾಗಿಯೂ ಗುರುತಿಸಿಕೊಂಡೆ. ಹಾಗೆ ಶುರುವಾದ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ಈ ಚಿತ್ರದ ನಿರ್ಮಾಪಕ ನಾಗರಾಜ್ ನನ್ನ ಹಳೆಯ ಸ್ನೇಹಿತ. ‘ಆನಂದ್’ ಸಿನಿಮಾ ತೆರೆಗೆ ಬಂದ ಕಾಲದಿಂದಲೂ ಜೊತೆಗೇ ಇದ್ದೇವೆ. ಫಣೀಶ್ ಬಂದು ಈ ಪಾತ್ರವನ್ನು ನೀವೇ ಮಾಡಬೇಕು ಅಂದರು. ಅವರು ಅಂದುಕೊಂಡಂತೆ ಪಾತ್ರ ನಿರ್ವಹಿಸಿದ್ದೀನಿ ಎನ್ನುವ ಭರವಸೆ ನನಗಿದೆ. ಹಗಲೂ ರಾತ್ರಿ ಚಿತ್ರೀಕರಣ ನಡೆಸಿದ್ದೇವೆ. ಎಲ್ಲರೂ ಶ್ರಮಿಸಿದ್ದೇವೆ. ಈ ಚಿತ್ರ ಇಡೀ ತಂಡಕ್ಕೆ ಉತ್ತಮ ಹೆಸರು ತಂದುಕೊಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಾಲರಾಜ್​.

    ಇದನ್ನೂ ಓದಿ: ನವೆಂಬರ್​ನಲ್ಲಿ ‘ಆರ್​ಆರ್​ಆರ್​’ ತಂಡ ಸೇರಿಕೊಳ್ತಾರಂತೆ ಆಲಿಯಾ ಭಟ್​

    ‘ಡಾರ್ಕ್ ಫ್ಯಾಂಟಸಿ’ ಚಿತ್ರದಲ್ಲಿ ಸುನೀತಾ ಮತ್ತು ಸುಶ್ಮಿತಾ ಎಂಬ ಇಬ್ಬರು ನಾಯಕಿಯರಿದ್ದಾರೆ. ಶೋಭರಾಜ್, ಮನ್​ದೀಪ್ ರಾಯ್, ಮೋಹನ್ ಜುನೇಜ ಮುಂತಾದವರ ತಾರಾಗಣವಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬಹುತೇಕ ಮುಗಿದಿವೆ. ಒಂದು ಇಂಗ್ಲಿಷ್ ಹಾಡು ಸೇರಿದಂತೆ ಒಟ್ಟು ಐದು ಹಾಡುಗಳು ಈ ಸಿನಿಮಾದಲ್ಲಿವೆ.

    ನೇಹಾ ಮದುವೆಯಲ್ಲಿ ಊರ್ವಶಿ ತೊಟ್ಟ ಲೆಹಂಗಾ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts