

ಚಿತ್ರ: ಔಟ್ ಆ್ ಸಿಲಬಸ್
ನಿರ್ದೇಶನ: ಪ್ರದಿಪ್ ದೊಡ್ಡಯ್ಯ
ನಿರ್ಮಾಣ: ಕೆ. ವಿಜಯಕಲಾ ಸುಧಾಕರ್
ತಾರಾಗಣ: ಪ್ರದಿಪ್ ದೊಡ್ಡಯ್ಯ, ಹೃತಿಕಾ, ಯೋಗರಾಜ್ ಭಟ್, ಮಹಾಂತೇಶ್, ಜಹಾಂಗೀರ್, ಅಚ್ಯುತ್ ಕುಮಾರ್, ಲಕ್ಷ$್ಮಣ್ ಮುಂತಾದವರು.
| ಹರ್ಷವರ್ಧನ್ ಬ್ಯಾಡನೂರು
"ಕಿರಿಕ್ ಪಾರ್ಟಿ', "ಪದವಿಪೂರ್ವ', "ಹೊಂದಿಸಿ ಬರೆಯಿರಿ', "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ', "ಲಾಸ್ಟ್ ಬೆಂಚರ್ಸ್'... ಹೀಗೆ ಸ್ಯಾಂಡಲ್ವುಡ್ನಲ್ಲಿ ಕಾಲೇಜು ಕಥೆಗಳು ಆಗೊಮ್ಮೆ, ಈಗೊಮ್ಮೆ ಸದ್ದು ಮಾಡುತ್ತಿರುತ್ತವೆ. ಸಾಮಾನ್ಯವಾಗಿ ಕಾಲೇಜು ಹುಡುಗರ ತರಲೆ, ಹದಿಹರೆಯದವರ ತವಕ-ತಲ್ಲಣ, ಕೆಟ್ಟ ಕುತೂಹಲಗಳು, ಆಟ, ಓಟ, ಪಾಠಗಳ ನಡುವಿನ ವೇಗದ ಜೀವನದ ಮೇಲೆ ಕಥೆ ಸಾಗಿದರೂ ಕಾಮಿಡಿ ಎಂಬುದು ಸಾಮಾನ್ಯ ಅಂಶ. ಆದರೆ, ಪ್ರದಿಪ್ ದೊಡ್ಡಯ್ಯ ನಟಿಸಿ, ನಿರ್ದೇಶಿಸಿರುವ "ಔಟ್ ಆಫ್ ಸಿಲಬಸ್' ಅದೆಲ್ಲವನ್ನೂ ಮೀರಿದ ಕಥೆ ಹೊಂದಿದೆ.
"ಕಾಲೇಜ್ ಎಂಬುದು ಜೀವನದ ಒಂದು ಚಿಕ್ಕ ಭಾಗವಷ್ಟೇ. ಆದರೆ, ಜೀವನ ಅನ್ನೋದು ಔಟ್ ಆ್ ಸಿಲಬಸ್' ಎಂದು ಕಾಲೇಜು ವೇದಿಕೆಯಲ್ಲಿ ನಿಂತು ವಿದ್ಯಾರ್ಥಿಗಳಿಗೆ ನೀತಿಪಾಠ ಹೇಳುತ್ತಾನೆ ಹಳೆಯ ವಿದ್ಯಾರ್ಥಿ ದೇವ್ (ಪ್ರದಿಪ್). ಸಣ್ಣ ವಯಸ್ಸಿನಲ್ಲೇ ಸ್ವಂತ ಕಾಲ ಮೇಲೆ ನಿಂತಿರುವ ಯುವಕನಾತ. ಅದಾಗಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತನ ಕಾರ್ಯಕ್ಷಮತೆಯನ್ನು ಮೆಚ್ಚಿ, ಆ ಕಂಪನಿಯವರೇ ಆತನನ್ನು ಮತ್ತಷ್ಟು ಓದಲು ಫೀಸ್ ಕಟ್ಟಿ ಕಾಲೇಜಿಗೆ ಕಳುಹಿಸಿರುತ್ತಾರೆ. ಕಾಲೇಜಿನಲ್ಲೂ ಆತನಿಗೆ ಉತ್ತಮ ಹೆಸರಿರುತ್ತದೆ. ಆತನಿಗೆ ಸಹಪಾಠಿ ದಿವ್ಯಾಳ (ಹೃತಿಕಾ) ಮೇಲೆ ಪ್ರೇಮಾಂಕುರವಾಗುತ್ತದೆ. ಓದು ಮುಗಿದ ಬಳಿಕ ದೇವ್ ಕೆಲಸದ ನಿಮಿತ್ತ ಅಮೆರಿಕಗೆ ಹಾರುತ್ತಾನೆ. ಇತ್ತ ದಿವ್ಯಾ ಒಂಟಿಯಾಗುತ್ತಾಳೆ. ಎರಡು ತೀರಗಳಲ್ಲಿರುವ ಈ ಜೋಡಿಯ ಪ್ರೀತಿ ಮೊಬೈಲ್ನಲ್ಲಿ ಮುಂದುವರಿಯುತ್ತಿರುತ್ತದೆ. ಆದರೆ, ಎಷ್ಟು ದಿನ? ದೇವ್ನ ನಂಬಿಕೊಂಡರೆ ಆಗುವುದಿಲ್ಲ ಅಂತ ದಿವ್ಯಾ ಮನೆಯಲ್ಲಿ ನೋಡಿದ ಹುಡುಗನನ್ನು ಮದುವೆಯಾಗಲು ಮುಂದಾಗುತ್ತಾಳೆ. ಮುಂದೆ? ಈ ಜೋಡಿ ಮತ್ತೆ ಒಂದಾಗುತ್ತಾ? ಇಬ್ಬರೂ ಮದುವೆಯಾಗುತ್ತಾರಾ? ಎಂಬುದೇ "ಔಟ್ ಆಫ್ ಸಿಲಬಸ್'.
ಚೊಚ್ಚಲ ನಿರ್ದೇಶನದಲ್ಲಿಯೇ ಸರಳ, ಸುಂದರ ಕಾಲೇಜ್ ಲವ್ಸ್ಟೋರಿ ಹೇಳುವ ಪ್ರಯತ್ನ ಮಾಡಿದ್ದಾರೆ ಪ್ರದಿಪ್. ನಿಧಾನವೆನಿಸಿದರೂ ಸ್ವಲ್ಪ ತಾಳ್ಮೆ ತೋರಿಸಿದರೆ, ಅಚ್ಚುಕಟ್ಟಾಗಿ ನೋಡಿಸಿಕೊಂಡು ಹೋಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗಾಗಿಯೇ ಅಲ್ಲಲ್ಲಿ ಉತ್ತಮ ಸಂದೇಶಗಳಿವೆ. ಚಿತ್ರಕಥೆ ಮತ್ತಷ್ಟು ಗಟ್ಟಿಯಾಗಿದ್ದರೆ, ಪ್ರೇಕ್ಷಕರಿಗೆ ಕಥೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಕ್ಲೆಮ್ಯಾಕ್ಸ್ ಟ್ವಿಸ್ಟ್ ಚಿತ್ರದ ಹೈಲೈಟ್. ನಟನೆಯಲ್ಲಿ ಪ್ರದಿಪ್ ಗಮನ ಸೆಳೆಯುತ್ತಾರೆ. ಗೊಂದಲಗಳ ಗೂಡಿನಲ್ಲಿ ಸಿಲುಕಿರುವ ದಿವ್ಯಾ ಪಾತ್ರದಲ್ಲಿ ಹೃತಿಕಾ ಇಷ್ಟವಾಗುತ್ತಾರೆ. ಜಹಾಂಗೀರ್, ಯೋಗರಾಜ್ ಭಟ್, ಮಹಾಂತೇಶ್ ಮತ್ತು ಲಕ್ಷ್ಮಣ್ ಅಲ್ಲಲ್ಲಿ ನಗಿಸುತ್ತಾರೆ. ಹಾಡುಗಳು ಇಂಪಾಗಿ ಕೇಳಿಸುತ್ತವೆ. ಕಾಲೇಜು ವಿದ್ಯಾರ್ಥಿಗಳು ರಿಲೇಟ್ ಮಾಡಿಕೊಳ್ಳಬಹುದಾದ, ಪ್ರೀತಿಸುವ ಜೋಡಿಗಳು ಕಲಿಯಬಹುದಾದ ಹಲವು ಅಂಶಗಳು ಚಿತ್ರದಲ್ಲಿವೆ. ಹೀಗಾಗಿ "ಔಟ್ ಆಫ್ ಸಿಲಬಸ್' ಒಮ್ಮೆ ನೋಡಲಡ್ಡಿಯಿಲ್ಲ.