ನಂಬಲು ಅಸಾಧ್ಯವಾದ ತನಿಖಾ ವರದಿ ಚಿತ್ರವಾದಾಗ ....

Hosa Digantha - Final
Published on

ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ 'ಗಡಿಯಾರ' ಎಂಬ ಚಿತ್ರ ಬಿಡುಗಡೆಯಾದ ವಿಷಯ ನೆನಪಿದೆಯಾ? ಶೇ. 50ರಷ್ಟು ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಿದ ಸಂದರ್ಭದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶೀತಲ್​ ಶೆಟ್ಟಿ ನಟಿಸಿದ್ದರು ಮತ್ತು ಪ್ರಬೀಕ್​ ಮೊಗವೀರ್​ ಈ ಚಿತ್ರವನ್ನು ನಿರ್ದೇಶಿಸಿದ್ದರು.

ಈಗ ಅದೇ ಪ್ರಬೀಕ್​ ಮೊಗವೀರ್​, ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರವನ್ನು ನಿರ್ದೇಶಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಚಿತ್ರದ ಹೆಸರು 'ಹೊಸ ದಿಗಂತ'. ವಿಶೇಷವೆಂದರೆ, ಮನುಷ್ಯನ ಮೆದುಳಿನ ಮೇಲೆ ಈ ಕಥೆ ಹೆಣೆಯಲಾಗಿದೆ. 'ಸಂಥಿಂಗ್ ಅನೇಬಲ್ ಟು ಎಕ್ಸ್‌ಪ್ಲೇನ್' ಎನ್ನುವ ಟ್ಯಾಗ್​ಲೈನ್​ ಈ ಚಿತ್ರಕ್ಕೆ ಇದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದೆ.

ಬರೀ ನಿರ್ದೇಶನವಷ್ಟೇ ಅಲ್ಲ, ಕಥೆ, ಚಿತ್ರಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನೂ ಪ್ರಬೀಕ್​ ಮೊಗವೀರ್​ ಅವರೇ ಹೊತ್ತಿದ್ದಾರೆ. 'ಗಡಿಯಾರ'ಕ್ಕಿಂತ ಈ ಚಿತ್ರ ವಿಭಿನ್ನವಾಗಿ ಇರಲಿದೆ ಎನ್ನುವ ಅವರು, 'ಸಾಮಾಜಿಕ ಸಂದೇಶ ಇರುವ ಮನರಂಜನೆ ಚಿತ್ರ ಇದಾಗಲಿದೆ. ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಮುಂದಿಡುವುದು ಕಥೆಯ ಮುಖ್ಯ ಉದ್ದೇಶ' ಎನ್ನುತ್ತಾರೆ ಪ್ರಬೀಕ್​.

ಇನ್ನು, 'ಹೊಸ ದಿಗಂತ' ಚಿತ್ರಕ್ಕೆ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಯಾರೆಲ್ಲ ನಟಿಸುತ್ತಾರೆ ಮತ್ತು ಯಾರೆಲ್ಲ ತಂತ್ರಜ್ಱರು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net