ಶಾರುಖ್​ ಖಾನ್ ‘ಪಠಾಣ್’ ಚಿತ್ರದಲ್ಲಿ ಪ್ರಭಾಸ್​ಗೂ ಇದೆಯಂತೆ ವಿಶೇಷ ಪಾತ್ರ!

Pathan
Published on

ಮುಂಬೈ: ಶಾರುಖ್​ ಖಾನ್​ ನಟಿಸುತ್ತಿರುವ ಪಠಾಣ್ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಸಲ್ಮಾನ್​ ಖಾನ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಒಂದೆಡೆಯಾದರೆ, ವಾರ್ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಈ ಸಿನಿಮಾಕ್ಕೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಇದೀಗ ಇದೇ ಚಿತ್ರದಿಂದ ಮತ್ತೊಂದು ಹೊಸ ಸುದ್ದಿ ತೇಲಿ ಬಂದಿದೆ. ಅದೇನೆಂದರೆ, ಪಠಾಣ್ ಚಿತ್ರದಲ್ಲಿ ಟಾಲಿವುಡ್ ನಟ ಪ್ರಭಾಸ್ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಹಾಗಾದರೆ, ಪ್ರಭಾಸ್ ಪಾತ್ರವೇನು? ಈ ಪ್ರಶ್ನೆಗೆ ಉತ್ತರವೆಂಬಂತೆ ಪಠಾಣ್​ ಚಿತ್ರದಲ್ಲಿ ಪ್ರಭಾಸ್ ರಾ ಏಜೆಂಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಬಾಹುಬಲಿ ಸಿನಿಮಾ ಮೂಲಕ ಪ್ಯಾನ್​ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಪ್ರಭಾಸ್​ ಹಿಂದೆಂದೂ ಕಾಣಿಸಿದ ಅವತಾರದಲ್ಲಿ ಈ ಸಿನಿಮಾದಲ್ಲಿ ಎದುರಾಗಲಿದ್ದಾರಂತೆ.

ಅಂದಹಾಗೆ, ಜನವರಿಯಲ್ಲಿಯೇ ಈ ಸಿನಿಮಾದಲ್ಲಿ ನಟಿಸುವಂತೆ ಪ್ರಭಾಸ್​ಗೆ ನಿರ್ದೇಶಕರು ಅಪ್ರೋಚ್​ ಮಾಡಿದ್ದರಂತೆ. ಆದರೆ, ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಸದ್ಯ ಸಲಾರ್ ಒಂದಿಷ್ಟು ಭಾಗದ ಶೂಟಿಂಗ್ ಮುಗಿದಿದೆ. ರಾಧೆ ಶ್ಯಾಮ್​ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಆದಿಪುರುಷ್ ಸಿನಿಮಾ ಇನ್ನೇನು ಶೂಟಿಂಗ್ ಆರಂಭಿಸಬೇಕು. ಈ ಗ್ಯಾಪ್​ನಲ್ಲಿಯೇ ಪಠಾಣ್​ ಚಿತ್ರಕ್ಕೂ ಪ್ರಭಾಸ್ ಸಮಯ ನೀಡಿದ್ದಾರೆ ಎನ್ನಲಾಗುತ್ತಿದೆ. 250 ಕೋಟಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net