ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಟೀಸರ್ ರಿಲೀಸ್ ಆಗಿದೆ. ಬಿಡುಗಡೆಯಾದ 24 ಗಂಟೆಗಳಲ್ಲಿ 'ಜೇಮ್ಸ್' ಟೀಸರ್ ದಾಖಲೆಗಳನ್ನು ಬರೆಯ ತೊಡಗಿದೆ. ಮತ್ತೊಂದೆಡೆ, ನಟ ಪುನೀತ್ ಅಭಿಮಾನಿಗಳು ಅವರ ಈ 'ಜೇಮ್ಸ್' ಟೀಸರ್ ನೋಡಿ ಭಾವುಕರಾಗಿದ್ದಾರೆ. ಕೇವಲ ಅಭಿಮಾನಿಗಳು ಅಲ್ಲದೇ, ಅಪ್ಪು ಅವರ ಆಪ್ತರು, ಸ್ನೇಹಿತರು, ಇತರ ಸೆಲೆಬ್ರಿಟಿಗಳು ಕೂಡಾ ಭಾವುಕರಾಗಿದ್ದಾರೆ. ಸದ್ಯ, ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ಪ್ರಭಾಸ್ ಅವರು ಕೂಡಾ 'ಜೇಮ್ಸ್' ಟೀಸರ್ ನೋಡಿ ಜೊತೆಗೆ ಈ ಟೀಸರ್ ಅನ್ನು ತಮ್ಮ ಇನ್ಸ್ಟಾಗ್ರಾಂಲ್ಲಿ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ. 7.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಭಾಸ್ ಅವರ ಈ ಪೋಸ್ಟ್ ಗೆ 5 ಲಕ್ಷ ಲೈಕ್ಸ್ ಬಂದಿವೆ.