ಬ್ರಿಟನ್ ಪತ್ರಿಕೆಯ ಪ್ರಕಾರ ಭಾರತ ಮೂಲದ ಇವರೆ ನೋಡಿ ದಕ್ಷಿಣ ಏಷ್ಯಾದ ನಂ 1 ನಟ! ಮೂರನೇ ಸ್ಥಾನದಲ್ಲೂ ಭಾರತ ವ್ಯಕ್ತಿ!

Published on
ಬಾಹುಬಲಿ, ಬಾಹುಬಲಿ-2 ಎಂಬ ಸಿನಿಮಾಗಳು ನಮ್ಮ ದಕ್ಷಿಣ ಭಾರತದ ನಟ ಡಾರ್ಲಿಂಗ್ ಪ್ರಭಾಸ್ ಅವರ ಅದೃಷ್ಟವನ್ನೆ ಬದಲಾಯಿಸಿ ಬಿಟ್ಟಿವೆ ಎಂದರೆ ಸಂಶಯವಿಲ್ಲ. ಏಕೆಂದರೆ, ಬಾಹುಬಲಿ, ಬಾಹುಬಲಿ-2 ಚಿತ್ರಗಳು ಇಡೀ ವಿಶ್ವದ ಗಮನ ಸೆಳೆದ ಫಿಕ್ಷನ್ ಸಿನಿಮಾಗಳಾಗಿದ್ದು, ಅವುಗಳಲ್ಲಿ ನಟಿಸಿದ ಪ್ರಭಾಸ್ ಅವರು ಸಹ ಜಗತ್ತಿನಲ್ಲಿರುವ ಬಹುತೇಕ ಎಲ್ಲಾ ಸಿನಿಪ್ರಿಯರಿಗೆ ಚಿರಪರಿಚಿತರಾಗಿದ್ದಾರೆ. ಇನ್ನು ಈ ಎರಡು ಚಿತ್ರಗಳ ನಂತರ ಸಾಲು ಸಾಲು ಸಿನಿಮಾಗಳ ಆಫರ್​​ಗಳನ್ನು ಪಡೆಯುತ್ತಿದ್ದಾರೆ ನಟ ಪ್ರಭಾಸ್. ಬಾಹುಬಲಿ-2 ನಂತರ ಬರೀ 'ಸಾಹೋ' ಸಿನಿಮಾ ಮಾತ್ರ ಬಿಡುಗಡೆಯಾಗಿದ್ದರೂ, ಬೇರೆ ಬೇರೆ ಸಿನಿಮಾಗಳು ಇನ್ನು ರಿಲೀಸ್ ಆಗಲು ರೆಡಿಯಾಗಿವೆ. ಇಷ್ಟು ಯಶಸ್ಸಿನ ನಡುವೆ ನಟ ಪ್ರಭಾಸ್ ಅವರಿಗೆ ಮತ್ತೊಂದು ಖ್ಯಾತಿ ಲಭಿಸಿದೆ. ಅದುವೆ, ಬ್ರಿಟನ್ ಪತ್ರಿಕೆಯೊಂದರಿಂದ 2021 ರಲ್ಲಿ ದಕ್ಷಿಣ ಏಷ್ಯಾ ವಿಭಾಗದ ನಟರಲ್ಲಿ ವಿಶ್ವಕ್ಕೆ ನಂ 1 ಎಂದು ಪ್ರಭಾಸ್ ಎನಿಸಿಕೊಂಡಿರುವುದು.
ಯುಕೆ ಮೂಲದ ಈಸ್ಟರ್ನ್ ಐ ವಾರಪತ್ರಿಕೆ ನಟ ಡಾರ್ಲಿಂಗ್ ಪ್ರಭಾಸ್​ಗೆ ನಂ 1 ಪಟ್ಟ ಕೊಟ್ಟಿದೆ. ಇದಕ್ಕೆ, ಮೂರು ಕಾರಣಗಳು ಇವೆ. ಒಂದು ನಟ ಪ್ರಬಾಸ್ ಭಾರತದ ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿರುವುದು. ಎರಡನೇ ಕಾರಣ ಅಂದರೆ, ಪ್ರಾದೇಶಕ ಭಾಷೆಯ ಸಿನಿಮಾಗಳ ಮೂಲಕವೇ ಹಿಂದೆಂದೂ ಯಾರು ಮಾಡದಷ್ಟು ಗಮನ ಸೆಳೆದಿದ್ದಾರೆ. ಮೂರನೇ ಕಾರಣ ಅಂದರೆ ಗಡಿರೇಖೆಯನ್ನು ದಾಟಿ ಮುನ್ನುಗ್ಗಿ, ಅಭಿಮಾನಿಗಳನ್ನು ಮೆಚ್ಚಿಸಿ ಜೊತೆಗೆ ಪ್ರೇರೆಪಿಸಿದ ನಟ ಪ್ರಭಾಸ್. ಹಾಗಾಗಿ, ಈ ಮೂರು ಮಾನದಂಡಗಳಿಂದ ಡಾರ್ಲಿಂಗ್ ಪ್ರಭಾಸ್​ಗೆ ನಂ 1 ಪಟ್ಟ ಕೊಟ್ಟಿದೆ ಈಸ್ಟರ್ನ್ ಐ ವಾರಪತ್ರಿಕೆ. ಮೊದಲು, ಟಾಪ್ 50 ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ ಮಾಡಿದ ಬ್ರಿಟನ್​​ನ ಈಸ್ಟರ್ನ್ ಐ, ನಂತರ ಆ ಪಟ್ಟಿಯಿಂದ 2021ರಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದು ಪ್ರಭಾಸ್ ಎಂದು ಅವರನ್ನೆ ಮೊದಲ ಸ್ಥಾನಕ್ಕೆ ಆಯ್ಕೆ ಮಾಡಿದೆ. ಇನ್ನು ಎರಡನೇ ಸ್ಥಾನದಲ್ಲಿದ್ದಾರೆ ಪಾಕ್ ನಟ ರಿಜ್ ಅಹಮದ್ ಇದ್ದಾರೆ. ಗಾಯನ ಮತ್ತು ನಟನೆ ಎಂಬ ಎರಡು ಕ್ಷೇತ್ರಗಳಲ್ಲಿ ಬಹಳಷ್ಟು ಹೆಸರು ಮಾಡಿ ತಮ್ಮ 'ಸೌಂಡ್ ಆಫ್ ಮೆಟಲ್' ಚಿತ್ರಕ್ಕೆ ಅತ್ಯುತ್ತಮ ನಟನ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಹೀಗಾಗಿ, ಅವರಿಗೆ 2 ನೇ ಸ್ಥಾನ ಲಭಿಸಿದೆ. ಇನ್ನು, ಮೂರನೇ ಸ್ಥಾನದಲ್ಲಿ ಮತ್ತೆ ಭಾರತ ದೇಶದ ನಮ್ಮ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇರುವುದು ವಿಶೀಷ. ತಮ್ಮ 'ದಿ ವೈಟ್ ಟೈಗರ್' ಜೊತೆಗೆ 'ಮ್ಯಾಟ್ರಿಕ್ಸ್' ಚಿತ್ರಗಳಿಂದ ತುಂಬಾ ಖ್ಯಾತಿ ಪಡೆದಿರುವುದರಿಂದ ನಟಿ ಪ್ರಿಯಾಂಕಾ ಚೋಪ್ರಾಗೆ ಮೂರನೇ ಸ್ಥಾನ ಧಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net