ಕೊನೆಗೂ ಮದುವೆಯಾದ್ರು ಪೂನಂ ಪಾಂಡೆ!

Poonam Pandey - Final
Published on

ಮುಂಬೈ: ಮಾದಕ ನಟಿ ಪೂನಂ ಪಾಂಡೆ, ತಮ್ಮ ಬಹುಕಾಲದ ಗೆಳೆಯ ಸ್ಯಾಮ್​ ಬಾಂಬೆ ಅವರನ್ನು ಮದುವೆಯಾಗುವುದಾಗಿ ಹೇಳುತ್ತಲೇ ಇದ್ದರು. ಕೆಲವು ದಿನಗಳ ಹಿಂದೆ, ಇಬ್ಬರೂ ಸೋಷಿಯಲ್​ ಮೀಡಿಯಾ ಮೂಲಕ ಜತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದರು.

ಇದೀಗ ಪೂನಂ ಮತ್ತು ಸ್ಯಾಮ್​ ಕೊನೆಗೂ ಮದುವೆಯಾಗಿದ್ದಾರೆ. ಮುಂಬೈನಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ಅವರಿಬ್ಬರು, ಇನ್​ಸ್ಟಾಗ್ರಾಂ ಮೂಲಕ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ ಮೂಲಕ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ಪೂನಂ, 'ನಿನ್ನ ಜತೆ ಮುಂದಿನ ಏಳು ಜನ್ಮಗಳನ್ನು ಕಳೆಯುವ ನಿರೀಕ್ಷೆಯಲ್ಲಿ' ಎಂದು ಬರೆದುಕೊಂಡಿದ್ದಾರೆ. ಇನ್ನು ಸ್ಯಾಮ್​ ಸಹ ಪೋಟೋ ಹಂಚಿಕೊಳ್ಳುವುದರ ಜತೆಗೆ, ಮಿಸ್ಟರ್​ ಆಂಡ್​ ಮಿಸಸ್​ ಬಾಂಬೆ ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ.

ಬಹುಕಾಲದ ಸ್ನೇಹಿತರಾದ ಪೂನಂ ಮತ್ತು ಸ್ಯಾಮ್​, ಎರಡು ತಿಂಗಳ ಹಿಂದಷ್ಟೇ ಎಂಗೇಜ್​ ಆಗಿದ್ದರು. ಸರಳ ಸಮಾರಂಭದಲ್ಲಿ ಅವರಿಬ್ಬರ ನಿಶ್ಚಿತಾರ್ಥವಾಗಿತ್ತು. ಇದೀಗ ಅವರು ಅಷ್ಟೇ ಸರಳವಾಗಿ ಮದುವೆಯಾಗಿದ್ದಾರೆ.

'ನಶಾ' ಎಂಬ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಪೂನಂ, ಕನ್ನಡದ 'ಲವ್​ ಈಸ್​ ಪಾಯ್ಸನ್​' ಎಂಬ ಚಿತ್ರದಲ್ಲಿ ಐಟಂ ಡ್ಯಾನ್ಸ್​ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net