ಮುಂಬೈನಲ್ಲಿ ಪೂನಂ ಪಾಂಡೆ ಬಂಧನ!

poonam pandey
Published on

ಮುಂಬೈ: ಬಾಲಿವುಡ್​ನ ಮಾದಕ ಬೆಡಗಿ, ರೂಪದರ್ಶಿ ಪೂನಂ ಪಾಂಡೆ ಮತ್ತು ಆಕೆಯ ಗೆಳೆಯನನ್ನು ಭಾನುವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದಿಲ್ಲೊಂದು ವಿವಾದ, ಬೋಲ್ಡ್ ಫೋಟೋಶೂಟ್​ಗಳಿಂದಲೇ ಸದಾ ಸುದ್ದಿಯಲ್ಲಿರುವ 29 ವರ್ಷದ ಪೂನಂ ಪಾಂಡೆ ಈ ಬಾರಿ ಕೋವಿಡ್​-19 ಲಾಕ್​ಡೌನ್​ ಉಲ್ಲಂಘಿಸಿ ಕಾನೂನು ಕ್ರಮ ಎದುರಿಸುವಂತಾಗಿದೆ. ಇಡೀ ದೇಶವೇ ಕರೊನಾ ಮಣಿಸುವ ಹೋರಾಟದಲ್ಲಿದೆ. ಈಕೆ ಮಾತ್ರ ಲಾಕ್​ಡೌನ್​ ನಿಯಮ ಜಾರಿಯಲ್ಲಿದ್ದರೂ ಕ್ಯಾರೆ ಎನ್ನದೆ ಮುಂಬೈನ ಮರೀನ್​ ಡ್ರೈವ್​ನಲ್ಲಿ ತನ್ನ ಗೆಳೆಯ ಸ್ಯಾಮ್ ಅಹ್ಮದ್ ಬಾಂಬೆ (46) ಜತೆ ಸುತ್ತಾಡಲು ಕಾರಿನಲ್ಲಿ ಹೋಗಿದ್ದಳು.

ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ಸಾಧ್ಯತೆ ಇರುವ ನಿರ್ಲಕ್ಷ್ಯದ ಕ್ರಿಯೆ ಮತ್ತು ಲಾಕ್​ಡೌನ್​ಗೆ ಅಸಹಕಾರ, ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೂನಂ ಪಾಂಡೆ ಮತ್ತು ಸ್ಯಾಮ್​ ಅಹ್ಮದ್​ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ಮೃತ್ಯುಂಜಯ ಹಿರೇಮಠ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಮೈಮಾಟ ತೋರಿಸುತ್ತಲೇ ಲಕ್ಷಾಂತರ ಅಭಿಮಾನಿಗಳನ್ನು ಪೂನಂ ಪಾಂಡೆ ಹೊಂದಿದ್ದಾಳೆ. ಪಡ್ಡೆಹುಡುಗರ ಫೇವರಿಟ್ ನಟಿ, ಬಿಟೌನ್​ ವೈಯ್ಯಾರಿ ಈಗ ಕಾನೂಕು ಸಂಕಷ್ಟಕ್ಕೆ ಸಿಲುಕಿರುವುದು ಅವರ ಅಭಿಮಾನಿಗಳಿಗೆ ಭಾರಿ ಬೇಸರದ ವಿಷಯವಾದರೂ, ಲಾಕ್​ಡೌನ್​ ಉಲ್ಲಂಘಿಸುವ ಅನಿವಾರ್ಯತೆಯಾದಾರೂ ಏನಿತ್ತು? ಎಂದು ಕೆಲವರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net