ದೊಡ್ಡ ಬಜೆಟ್ ಚಿತ್ರಗಳಿಂದ ಪೂಜಾ ಹೆಗ್ಡೆ ಔಟ್; ಟಾಪ್ ನಟರ ಚಿತ್ರದಲ್ಲಿ ಪೂಜಾಗೆ ಯಾಕಿಲ್ಲ ಅವಕಾಶ?

pooja hegde
Published on

ಆಂಧ್ರಪ್ರದೇಶ: ಬಾಲಿವುಡ್, ಕಾಲಿವುಡ್, ಟಾಲಿವುಡ್ ಚಿತ್ರರಂಗದ ಖ್ಯಾತ ನಟರ ಸಿನಿಮಾಗೆ ಪೂಜಾ ಹೆಗ್ಡೆ(Pooja Hegde) ಅವರೇ ನಾಯಕಿಯಾಗಿ ನಟಿಸಬೇಕು ಎನ್ನುತ್ತಿದ್ದ ನಿರ್ದೇಶಕರು ಇಂದು ಅವರನ್ನು ಹೊಸ ಚಿತ್ರಗಳಿಂದ ಕೈಬಿಡಲು ಕಾರಣವೇನು ಎಂಬ ಪ್ರಶ್ನೆ ಇದೀಗ ಸಿನಿಪ್ರೇಕ್ಷಕರಲ್ಲಿ ಕಾಡತೊಡಗಿದೆ.

ದಿನದಿಂದ ದಿನಕ್ಕೆ ನಟಿ ಪೂಜಾ ಹೆಗ್ಡೆ ಜನಪ್ರಿಯತೆ ಮತ್ತು ಬೇಡಿಕೆಯು ಕುಸಿತ ಕಾಣುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರ ಮೂಡಿಸಿದೆ. ಒಂದು ಕಾಲದಲ್ಲಿ ದೊಡ್ಡ ಬಜೆಟ್(Big Budget) ಸಿನಿಮಾಗಳಿಗೆ ಟಾಪ್ ನಟಿಯಾಗಿ ಆಯ್ಕೆಯಾಗುತ್ತಿದ್ದ ಪೂಜಾ ಅವರನ್ನು ಇದೀಗ ಶ್ರೀಲೀಲಾ(Sreeleela) ಮತ್ತು ರಶ್ಮಿಕಾ(Rashmika) ವೇಗವಾಗಿ ಬದಲಾಯಿಸುತ್ತಿದ್ದಾರೆ ಎಂಬುದು ಇತ್ತೀಚಿನ ಚಿತ್ರಗಳ ಮೂಲಕ ಸ್ಪಷ್ಟವಾಗುತ್ತಿದೆ.

ಈ ಹಿಂದೆ ಅಲಾ ವೈಕುಂಠಪುರಮುಲೂ, ಮಹರ್ಷಿ ಮತ್ತು ಅರವಿಂದ ಚಿತ್ರಗಳಲ್ಲಿ ನಟಿಸಿದ ಪೂಜಾ ಹೆಗ್ಡೆ, ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸುವಲ್ಲಿ ಪ್ರಮುಖರಾಗಿದ್ದರು. ಪೂಜಾಗೆ ಯಾವುದೇ ಹೊಸ ಸಿನಿಮಾಗಳಿಗೆ ಆಫರ್ ಲಭಿಸುತ್ತಿಲ್ಲ ಎಂಬ ವಿಷಯ ಸದ್ಯ ಟಾಲಿವುಡ್ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನಟಿ ಪೂಜಾ ಹೆಗ್ಡೆ ನಟನೆಯ ಮೃಗ, ರಾಧೆ ಶ್ಯಾಮ್, ಆಚಾರ್ಯ, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮತ್ತು ಸರ್ಕಸ್ ಚಿತ್ರಗಳು ಸೋಲು ಕಂಡಿದ್ದು, ಈ ಬೆಳವಣಿಗೆಗಳು ನಟಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ ಎಂದು ವರದಿಗಳು(Reports) ಹೇಳಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net