ಪವನ್ ಕಲ್ಯಾಣ್ ಅಭಿನಯದ ಹೊಸ ಚಿತ್ರಕ್ಕೆ ಪೂಜಾ ನಾಯಕಿ...

sdasdasd
Published on

ಪವನ್ ಕಲ್ಯಾಣ್ ಅಭಿನಯದ ಹೊಸ ಚಿತ್ರ ‘ಭವಧೀಯುಡು ಭಗತ್ ಸಿಂಗ್’ಗೆ ನಾಯಕಿ ಯಾರಾಗಬಹುದು? ಈ ಪ್ರಶ್ನೆಗೆ ಚಿತ್ರತಂಡದವರೂ ಹೆಚ್ಚು ತಲೆ ಕೆಡಿಸಿಕೊಂಡರೋ ಇಲ್ಲವೋ ಗೊತ್ತಿಲ್ಲ. ಆದರೆ, ಟಾಲಿವುಡ್ ಮಂದಿ ಮಾತ್ರ ಈ ವಿಷಯದ ಕುರಿತು ಸಿಕ್ಕಾಪಟ್ಟೆ ಚರ್ಚೆ ಮಾಡಿದ್ದರು. ಈಗ ‘ಭವಧೀಯುಡು ಭಗತ್ ಸಿಂಗ್’ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಚಿತ್ರದಲ್ಲಿ ನಟಿಸಬಹುದಾದ ಸಂಭವನೀಯ ನಾಯಕಿಯರ ಪಟ್ಟಿಯಲ್ಲಿ ಪೂಜಾ ಹೆಗ್ಡೆ ಸಹ ಒಬ್ಬರಾಗಿದ್ದರು. ಆದರೆ, ಕೈಯಲ್ಲಿ ಒಂದಿಷ್ಟು ಚಿತ್ರಗಳಿದ್ದರಿಂದ ಅವರು ನಟಿಸುತ್ತಾರೋ ಇಲ್ಲವೋ ಎಂಬ ಗೊಂದಲ ಚಿತ್ರತಂಡದವರಿಗೇ ಇತ್ತು. ಆ ಗೊಂದಲ ಬಗೆಹರಿದಿದ್ದು, ಚಿತ್ರದಲ್ಲಿ ನಟಿಸುವುದಕ್ಕೆ ಪೂಜಾ ಒಪ್ಪಿಕೊಂಡಿದ್ದಾರಂತೆ. ಹಾಗಂತ ಚಿತ್ರದ ನಿರ್ದೇಶಕ ಹರೀಶ್ ಶಂಕರ್, ಇತ್ತೀಚೆಗೆ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪೂಜಾ ಕ್ಯಾಮರಾ ಎದುರಿಸುವ ಮೊದಲು, ನಿರ್ದೇಶಕ ಹರೀಶ್ ಒಂದಿಷ್ಟು ಸ್ಪಷ್ಟತೆ ಕೊಡಬೇಕಿದೆ. ಪ್ರಮುಖವಾಗಿ, ಯಾವಾಗ ಎಷ್ಟು ದಿನ ಚಿತ್ರೀಕರಣ ಮಾಡಲಾಗುತ್ತದೆ ಎಂದು ಮೊದಲು ಪೂಜಾಗೆ ಸ್ಪಷ್ಟಪಡಿಸಬೇಕಂತೆ. ಅದನ್ನು ನೋಡಿಕೊಂಡು, ಮಿಕ್ಕ ಚಿತ್ರಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡು, ಡೇಟ್ ಕೊಡುವುದಾಗಿ ಪೂಜಾ ಹೇಳಿದ್ದಾರಂತೆ. ಅಲ್ಲಿಗೆ ಚೆಂಡು ಚಿತ್ರತಂಡದವರ ಅಂಗಳಕ್ಕೆ ಬಂದು ಬಿದ್ದಿದೆ. ಚಿತ್ರತಂಡದವರ ಚಿತ್ರೀಕರಣ ಪ್ಲಾನ್ ಹೊಂದಿಕೆಯಾದರೆ ‘ಭವಧೀಯುಡು ಭಗತ್ ಸಿಂಗ್’ಗೆ ಪೂಜಾ ನಾಯಕಿಯಾಗಲಿದ್ದಾರೆ. ಮಿಸ್ ಆದರೆ, ಅವರ ಜಾಗಕ್ಕೆ ಬೇರೆ ಯಾರು ಬರುತ್ತಾರೋ ಗೊತ್ತಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net