'ಪೊಲೀಸ್ ಸ್ಟೋರಿ'ಗೆ 25 ... ಥ್ಯಾಂಕ್ಸ್​ ಹೇಳಿದ ಸಾಯಿಕುಮಾರ್

Police Story - Final
Published on

ಬೆಂಗಳೂರು: 'ಡೈಲಾಗ್ ಕಿಂಗ್' ಸಾಯಿಕುಮಾರ್ ಅಭಿನಯದ 'ಪೊಲೀಸ್ ಸ್ಟೋರಿ' ಚಿತ್ರವು ಇಂದಿಗೆ (ಆಗಸ್ಟ್​ 16) 25 ವರ್ಷ ಪೂರೈಸಿದೆ. 1996ರಲ್ಲಿ ಇದೇ ದಿನದಂದು 'ಪೊಲೀಸ್ ಸ್ಟೋರಿ' ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿತ್ತು.

ಸಾಹಸ ನಿರ್ದೇಶಕ ಥ್ರಿಲ್ಲರ್​ ಮಂಜು ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ಸಾಯಿಕುಮಾರ್​ ಅವರು ಅಗ್ನಿ ಎಂಬ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಕ್​ಲೈನ್​ ವೆಂಕಟೇಶ್​, ಸಾಧು ಕೋಕಿಲ, ಸತ್ಯಪ್ರಕಾಶ್​ ಮುಂತಾದವರು ಅಭಿನಯಿಸಿದ್ದ ಈ ಚಿತ್ರವು ಕನ್ನಡದಲ್ಲಿ ಸೂಪರ್​ ಹಿಟ್​ ಎಂದನಿಸಿಕೊಳ್ಳುವುದರ ಜತೆಗೆ ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ತೆರೆಕಂಡಿತ್ತು.

25 ವರ್ಷ ತುಂಬಿರುವ ಈ ಸಂದರ್ಭದಲ್ಲಿ ನಟ ಸಾಯಿಕುಮಾರ್, ಚಿತ್ರ ಯಶಸ್ಸಿಗೆ ಕಾರಣರಾದ ನಿರ್ಮಾಪಕ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಚಿತ್ರ‌ ಯಶಸ್ಸು ಕಾಣಲು ಮಾಧ್ಯಮದವರ ಹಾಗೂ ಕನ್ನಡ ಕಲಾಭಿಮಾನಿಗಳ ಪಾಲು ಬಹು ದೊಡ್ಡದು. ಅವರಿಗೆ ವಿಶೇಷ ಧನ್ಯವಾದ ಎನ್ನುತ್ತಾರೆ ಸಾಯಿಕುಮಾರ್.

'ಪೊಲೀಸ್​ ಸ್ಟೋರಿ' ಬಿಡುಗಡೆಯಾಗಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಇದೇ ತಂಡದೊಂದಿಗೆ ಸದ್ಯದಲ್ಲೇ ನೂತನ ಚಿತ್ರ ಆರಂಭಿಸುವ ಯೋಚನೆಯಿದೆ ಎಂದು ಸಾಯಿಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net