ಸುಶಾಂತ್​ ಆತ್ಮಹತ್ಯೆ: ಗರ್ಲ್​ಫ್ರೆಂಡ್​ ರಿಯಾ ಚಕ್ರವರ್ತಿ ವಿಚಾರಣೆ

Rhea - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಚುರುಕುಗೊಳಿಸಿದ್ದಾರೆ. ಸುಶಾಂತ್​ ಅವರ ಪ್ರೇಯಸಿ ಎನ್ನಲಾದ ರಿಯಾ ಚಕ್ರವರ್ತಿಯನ್ನು ಗುರುವಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕಳೆದ ಭಾನುವಾರ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಗೆ ಶರಣಾದರು. ಅವರ ಸಾವು ಉಸಿರುಗಟ್ಟಿಸುವಿಕೆಯಿಂದಾಗಿದೆ ಎಂದು ಪೋಸ್ಟ್​ ಮಾರ್ಟಂ ವರದಿ ತಿಳಿಸಿದೆ. ಆದರೆ, ಸುಶಾಂತ್​ ಆತ್ಮಹ್ಯೆ ಮಾಡಿಕೊಂಡಿದ್ದೇಕೆ, ಅವರಿಗೆ ಏನೆಲ್ಲಾ ಸಮಸ್ಯೆಗಳಿದ್ದವು ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಅವರ ವಿಚಾರಣೆ ನಿನ್ನೆ ನಡೆಸಲಾಗಿತ್ತು. ತಮ್ಮ ಮಗನಿಗೆ ಡಿಪ್ರೆಶನ್​ ಇದ್ದ ವಿಚಾರ, ತಮಗೆ ಗೊತ್ತೇ ಇರಲಿಲ್ಲ ಎಂದು ಕೆ.ಕೆ. ಸಿಂಗ್​ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಅದಲ್ಲದೆ, ಸುಶಾಂತ್​ ಅವರ ಮ್ಯಾನೇಜರ್​, ನಿರ್ದೇಶಕ ಮುಕೇಶ್​ ಛಾಬ್ರಾ ಸೇರಿದಂತೆ 10 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ಮಧ್ಯೆ, ರಿಯಾ ಚಕ್ರವರ್ತಿ ಅವರು ಬಾಂದ್ರಾ ಪೊಲೀಸ್​ ಸ್ಟೇಶನ್​ಗೆ ಗುರುವಾರ ಬೆಳಿಗ್ಗೆ ಹಾಜರಾಗಿ, ವಿಚಾರಣೆಗೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ರಿಯಾ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net