ಕತ್ರಿನಾ-ವಿಕ್ಕಿ ಕೌಶಲ್​ಗೆ ಜೀವ ಬೆದರಿಕೆ: ಬಂಧಿತನಿಂದ ಕಾರಣ ಕೇಳಿ ಶಾಕ್​ ಆದ ಪೊಲೀಸರು!

Katrina
Published on

ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್​ ಮತ್ತು ಅವರ ಪತಿ ವಿಕ್ಕಿ ಕೌಶಲ್​ಗೆ ಜೀವಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಕಾರಣ ಕೇಳಿದ ಪೊಲೀಸರೆ ಶಾಕ್​ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಂದ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಕ್ಕಿ ಕೌಶಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರು ಆತನ ಹೇಳಿಕೆಯಿಂದ ಅಚ್ಚರಿಗೊಳಗಾಗಿದ್ದಾರೆ.

ಮನ್ವಿಂದರ್ ಸಿಂಗ್​ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಬಾಲಿವುಡ್​ನಲ್ಲಿ ಈಗಷ್ಟೇ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದು, ಕತ್ರಿನಾ ಕೈಫ್​ ಅವರ ದೊಡ್ಡ ಅಭಿಮಾನಿ, ಈತ ಕತ್ರಿನಾಳನ್ನು ಮದುವೆಯಾಗಲು ಬಯಸಿದ್ದನಂತೆ ಇದಕ್ಕಾಗಿಯೇ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೇರೆ ಹೆಸರಿನಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಇನ್​ಸ್ಟಾಗ್ರಾಂನ ಈತನ ಖಾತೆಯಲ್ಲಿ ಈ ವ್ಯಕ್ತಿ ತನ್ನ ಹೆಸರನ್ನು ಕಿಂಗ್​ ಆದಿತ್ಯ ರಾಜಪೂತ್​ ಎಂದು ಬರೆದುಕೊಂಡಿದ್ದಾನೆ. ತನ್ನನ್ನು ತಾನು ನಟ ಎಂದು ಹೇಳಿಕೊಂಡಿದ್ದು, ನನ್ನ ಗೆಳತಿ ಹೆಂಡತಿ ಕತ್ರಿನಾ ಕೈಫ್​ ಎಂದೂ ಬರೆದುಕೊಂಡಿದ್ದಲ್ಲದೇ ಕತ್ರಿನಾಳ ಅಧಿಕೃತ ಐಡಿಗೂ ಟ್ಯಾಗ್​ ಮಾಡಿದ್ದ. ಸದ್ಯ ಈತನನ್ನು ಇನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net