ಪರಭಾಷೆಗಳಲ್ಲಿ ಪೊಗರು-ಮದಗಜಗಳ ಹವಾ

Pogaru - Final
Published on

ಬೆಂಗಳೂರು: ಕನ್ನಡ ಚಿತ್ರಗಳಿಗೆ ಬೇರೆ ಭಾಷೆಗಳಲ್ಲಿ ಡಿಮಾಂಡ್ ಕುದುರಿದ್ದು, ಹಲವು ಚಿತ್ರಗಳು ಪರಭಾಷೆಗಳಿಗೆ ಡಬ್ ಆಗುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ‘ಮದಗಜ’ ಮತ್ತು ‘ಪೊಗರು’ ಚಿತ್ರಗಳು ತೆಲುಗು, ತಮಿಳಿಗೆ ಡಬ್ ಆಗಿವೆ. ಇದೀಗ ಹೊಸ ವರ್ಷದ ಸಂಭ್ರಮದಲ್ಲಿ ಎರಡೂ ಚಿತ್ರಗಳ ಪರಭಾಷೆಗಳ ಟ್ರೇಲರ್​ಗಳು ಬಿಡುಗಡೆಯಾಗಿವೆ.

ಹೌದು, ಶುಕ್ರವಾರ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ತೆಲುಗು ಅವತರಣಿಕೆಯಾದ ‘ರೋರಿಂಗ್ ಮದಗಜ’ದ ಟೀಸರ್ ಬಿಡುಗಡೆಯಾಗಿದೆ. ಯೂಟ್ಯೂಬ್​ನ ಆನಂದ್ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾದ ಈ ಟೀಸರ್​ಗೆ ಒಂದು ಮಿಲಿಯನ್ ವೀಕ್ಷಣೆ ಸಿಕ್ಕಿದೆ. ವಿಶೇಷವೆಂದರೆ, ಈ ಟೀಸರ್​ಗೆ ಶ್ರೀಮುರಳಿ ಧ್ವನಿ ನೀಡಿದ್ದಾರೆ. ಇನ್ನು, ‘ಪೊಗರು’ ಚಿತ್ರದ ತೆಲುಗು ಅವತರಣಿಕೆಯಾದ ‘ಪೊಗರು’ ಮತ್ತು ತಮಿಳು ಅವತರಣಿಕೆಯಾದ ‘ಸೆಮ್ಮಪೊಗರು’ ಚಿತ್ರಗಳ ಡೈಲಾಗ್ ಟ್ರೖೆಲರ್ ಬಿಡುಗಡೆ ಹೊಸ ವರ್ಷದ ಮೊದಲ ದಿನದಂದೇ ಬಿಡುಗಡೆಯಾಗಿದೆ. ಈ ಪೈಕಿ ತೆಲುಗಿನ ‘ಪೊಗರು’ ಚಿತ್ರದ ಟೀಸರ್ ಐದು ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದರೆ, ತಮಿಳಿನ ‘ಸೆಮ್ಮತಿಮಿರು’ ಚಿತ್ರದ ಟ್ರೇಲರ್​ಗೆ ನಾಲ್ಕು ಮಿಲಿಯನ್ ಹಿಟ್ಸ್ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net