

ಮುಂಬೈ: ಪ್ಯಾನ್ ಇಂಡಿಯಾ ಆಗಿ ಗುರುತಿಸಿಕೊಂಡಿರುವ ಕಾಜಲ್ ಅಗರ್ವಾಲ್, ನಾಳೆ ಅಕ್ಟೋಬರ್ 30ರಂದು ಗೌತಮ್ ಕಿಚ್ಲು ಜತೆಗೆ ಮುಂಬೈನಲ್ಲಿ ಮದುವೆಯಾಗುತ್ತಿರುವ ವಿಷತ ಹೊಸದೇನಲ್ಲ. ಈಗಾಗಲೇ ಕಾಜಲ್, ತಾವು ಮದುವೆಯಾಗುತ್ತಿರುವ ವಿಷಯವನ್ನು ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: ಡಬ್ಬಿಂಗ್ ಮುಗಿಸಿದ ‘ಅರ್ಜುನ್ ಗೌಡ’ … ಬಿಡುಗಡೆ ಯಾವಾಗ?
ಇದೀಗ, ಮದುವೆಯ ಕೆಲಸಗಳು ಭರದಿಂದ ಸಾಗಿದ್ದು, ಕಾಜಲ್ ಮತ್ತು ಗೌತಮ್ ಇಬ್ಬರೂ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಅದರಲ್ಲೂ ಕಾಜಲ್, ಮೆಹಂದಿ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೋದಲ್ಲಿ ಕಾಜಲ್ ಒಂದು ಕೈಯನ್ನು ಮೇಲಕ್ಕೆ ಎತ್ತಿದ್ದು, ಇನ್ನೊಂದು ಕೈಯನ್ನು ಫೋಟೋಗೆ ಅಡ್ಡವಾಗಿ ಹಿಡಿದಿದ್ದಾರೆ.ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.
ಮುಂಬೈನ ದೊಡ್ಡ ಬ್ಯುಸಿನೆಸ್ಮ್ಯಾನ್ ಒಬ್ಬರನ್ನು ಕಾಜಲ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಈ ತಿಂಗಳ ಆರಂಭದಲ್ಲಿ ಕಾಜಲ್, ಗೌತಮ್ ಎನ್ನುವವರನ್ನು ಮದುವೆಯಾಗುತ್ತಿದ್ದಾರೆ ಮತ್ತು ಅವರಿಬ್ಬರ ಎಂಗೇಜ್ಮೆಂಟ್ ಇತ್ತೀಚೆಗಷ್ಟೇ ನಡೆದಿದೆ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ, ಕಾಜಲ್ ತಾವು ಮದುವೆಯಾಗುತ್ತಿರುವ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದರು.
ಇದನ್ನೂ ಓದಿ: ‘ಡಾರ್ಕ್ ಫ್ಯಾಂಟಸಿ’ ಮೂಲಕ ವಾಪಸ್ಸಾದ ಬಾಲರಾಜ್!
'ಮಗಧೀರ', 'ಸಿಂಗಂ', 'ಸ್ಪೆಷಲ್ 26' ಸೇರಿದಂತೆ ಕೆಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಕಾಜಲ್, ಇದೀಗ 'ಇಂಡಿಯನ್ 2', 'ಮುಂಬೈ ಸಾಗಾ', 'ಮೋಸಗಾಳ್ಳು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.