ಕತ್ತಲಲ್ಲಿ ಟಾರ್ಚ್ ಹಿಡಿದು ಹುಡುಕಾಟಕ್ಕಿಳಿದ ವಿಕ್ರಾಂತ್​ ರೋಣ

914252-kiccha-sudeep-phantom-begins
Published on

ಕೆಲ ದಿನಗಳ ಹಿಂದಷ್ಟೇ ಫ್ಯಾಂಟಮ್​ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುವ ಬಗ್ಗೆ ಸುದೀಪ್ ಹೇಳಿಕೊಂಡಿದ್ದರು. ಅದರಂತೆ ಹೈದರಾಬಾದ್​ನತ್ತ ಪ್ರಯಾಣ ಬೆಳೆಸಿದ್ದ ಸುದೀಪ್​, ​ಮೊದಲ ದಿನದ ಶೂಟಿಂಗ್​ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು, ಅಭಿಮಾನಿಗಳಿಗೆ ಸರ್ಪೈಸ್​ ಉಡುಗೊರೆ ನೀಡಿದ್ದರು. ಇನ್ನೊಂದು ಉಡುಗೊರೆ ನೀಡುವ ಬಗ್ಗೆಯೂ ಕಿಚ್ಚ ಹೇಳಿಕೊಂಡಿದ್ದರು. ಅದರಂತೆ ವಿಡಿಯೋ ಬಿಡುಗಡೆ ಆಗಿದೆ.

ಬೃಹತ್​ ಕಾಡಿನ ಹಿನ್ನೆಲೆಯಲ್ಲಿ ಸುದೀಪ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಗುಮ್ಮ ಬಂದ ಗುಮ್ಮ ವಿಡಿಯೋದಲ್ಲಿ ಪುಟ್ಟ ಮಗುವೊಂದಿಗೆ ಕಾಣಿಸಿಕೊಂಡಿದ್ದ ಸುದೀಪ್​, ಇದೀಗ ‘ರಾತ್ರಿ ಕುದುರೆ ಬೆನ್ನಾ ಏರಿ, ಬೀಸೋ ಗಾಳಿ ಜತೆಗೆ ಸೇರಿ, ಕತ್ತಲಲ್ಲಿ ಕಳ್ಳನಂತೆ ಬೇಟೆಯಾಡುವ ಬಿಲ್ಲನಂತೆ' ಎಂಬ ಹಿನ್ನೆಲೆ ಸಾಲುಗಳೊಂದಿಗೆ ಯಾರನ್ನೋ ಹುಡುಕುತ್ತಿದ್ದಾರೆ. ಸದ್ಯ ಹೊಸ ವಿಡಿಯೋ ಕುತೂಹಲಕ್ಕೆ ಕಾರಣವಾಗಿದೆ. ಗುರುವಾರದ ಶೂಟಿಂಗ್​ ದೃಶ್ಯವೊಂದನ್ನು ಮಧ್ಯಾಹ್ನ 3.30ಕ್ಕೆ ಶೇರ್​ ಮಾಡುವುದಾಗಿ ಸುದೀಪ್​ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು. ಅದರಂತೆ ರಿಲೀಸ್ ಆದ ವಿಡಿಯೋ ಸದ್ಯ ವೈರಲ್​ ಆಗುತ್ತಿದ್ದು, ಚಿತ್ರದ ಬಗೆಗೆಇನ ಕುತೂಹಲ ಹೆಚ್ಚಿಸುತ್ತಿದೆ.

ಇನ್ನು ಕರೊನಾ ಹಿನ್ನೆಲೆಯಲ್ಲಿ ಶೂಟಿಂಗ್​ ಆರಂಭಿಸಿದ ಮೊದಲ ನಟ ಎಂಬ ಪಟ್ಟವನ್ನೂ ಕಿಚ್ಚ ಸುದೀಪ್​ ಪಡೆದುಕೊಂಡಿದ್ದಾರೆ. ತಮ್ಮ ಶೂಟಿಂಗ್ ಅನುಭವವನ್ನೂ ಅವರು ಹೇಳಿಕೊಂಡಿದ್ದರು. ‘ಮತ್ತೆ ಮುಖಕ್ಕೆ ಮೇಕಪ್ ಹಾಕಿಕೊಳ್ಳುವುದು ಒಂದು ಅದ್ಬುತ ಅನುಭವ. ನನ್ನ ಪ್ಯಾಶನ್​ನಿಂದ ಸುದೀರ್ಘ ಕಾಲ ರಜೆಯಲ್ಲಿದ್ದಂತಾಗಿತ್ತು. ಆ ಪ್ಯಾಶನ್ ಬೇರೆನೂ ಅಲ್ಲ ಸಿನಿಮಾ. ಇದೀಗ ವಿಕ್ರಾಂತ್ ರೋಣನಾಗಿ ನಿಮ್ಮ ಮುಂದೆ ಮತ್ತೆ ಬಂದಿದ್ದೇನೆ’ ಎಂದಿದ್ದರು.

ಕಾಡಿನ ಬ್ಯಾಕ್​ಡ್ರಾಪ್ ರೀತಿಯ ಬೃಹತ್ ಸೆಟ್​ನಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದು, ಚಿತ್ರದ ಮೊದಲ ದಿನದ ದೃಶ್ಯ ಸದ್ದು ಮಾಡಿತ್ತು. ಗುಮ್ಮ ಬಂದ ಗುಮ್ಮ.. ಹಿನ್ನೆಲೆ ಧ್ವನಿ ಮತ್ತು ಬಿಜಿಎಂನಿಂದಲೇ 32 ಸೆಕೆಂಡ್​ನ ವಿಡಿಯೋ ಗಮನಸೆಳೆದಿತ್ತು. ಇದೀಗ ಎರಡನೇ ವಿಡಿಯೋ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net