ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ.
ಜುಲೈ9ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿ ಹಿಟ್ ಕಂಡ ಪೆದ್ದಿ ಸಿನಿಮಾ ನೋಡಲು ಲಭ್ಯ.
Peddi OTT Release: ವಿವಾದದ ಮಧ್ಯೆಯೂ ಸಾಕಷ್ಟು ಹಿಟ್ ಕಂಡ ಟಾಲಿವುಡ್ನ ಪೆದ್ದಿ ಸಿನಿಮಾ ಸದ್ಯ ಒಟಿಟಿಯಲ್ಲಿ ಮತ್ತೊಮ್ಮೆ ರಂಜಿಸಲು ರೆಡಿಯಾಗಿದೆ. ವಿಶ್ವಾದ್ಯಂತ 338.98 ಕೋಟಿಗೂ ಹೆಚ್ಚು ಗಳಿಕೆ ಕಂಡ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಪೆದ್ದಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.
ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬುಚಿ ಬಾಬು ಸನಾ ನಿರ್ದೇಶನದ ಟಾಲಿವುಡ್ ಖ್ಯಾತ ನಟ ರಾಮಚರಣ್ ನಟನೆಯ ಪೆದ್ದಿ ಸಿನಿಮಾ ಜುಲೈ 9 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. “ಆಟ ಬದಲಾಗಬಹುದು, ಆದರೆ ನಾಯಕ ಬದಲಾಗೋದಿಲ್ಲ ಎಂದು ಶೀರ್ಷಿಕೆ ಬರೆದುಕೊಂಡಿದೆ.
ಯಾವೆಲ್ಲ ಭಾಷೆಯಲ್ಲಿ ನೋಡಲು ಲಭ್ಯ
ತೆಲುಗು, ತಮಿಳು, ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲೂ ಪೆದ್ದಿ ಸಿನಿಮಾವನ್ನು ನೋಡಬಹುದು. ಜೊತೆಗೆ ಹಿಂದಿ ಆವೃತ್ತಿಯು ಶೀಘ್ರದಲ್ಲೇ ಇದೇ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
ವಿವಾದಕ್ಕೆ ಒಳಗಾಗಿದ್ದ ಸಿನಿಮಾ
ಜಾನ್ವಿ ಕಪೂರ್ ಈ ಸಿನಿಮಾದಲ್ಲಿ 'ಅಚ್ಚಿಯಮ್ಮ' ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಸಿನಿಮಾದ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳುವ ಬದಲಾಗಿ ಅವರನ್ನು ಐಟಂ ಗರ್ಲ್ನಂತೆ ತೋರಿಸಲಾಗಿದೆ. ಜಾನ್ವಿ ಕಪೂರ್ ಅವರ ಪಾತ್ರವನ್ನು ಮಿತಿಮೀರಿ ಬೋಲ್ಡ್ ಆಗಿ ತೋರಿಸಲಾಗಿದೆ ಮತ್ತು ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲ ಎಂದು ಪ್ರೇಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹಾಡೊಂದರಲ್ಲಿ ಅವರ ಕಣ್ಣಿನ ಬಗ್ಗೆ ನಾಯಕ ವಿವರಿಸಿದರೆ, ಕ್ಯಾಮೆರಾ ಮತ್ಯಾವುದನ್ನೋ ತೋರಿಸುತ್ತದೆ ಎಂದು ಕಿಡಿಕಾರಿದ್ದರು. ಆರೋಪ, ಆಕ್ಷೇಪ ಕೇಳಿ ಬಂದ ದೃಶ್ಯಗಳಿಗೆ ನಿರ್ದೇಶಕ ಬುಚ್ಚಿಬಾಬು ಸನಾ ಕತ್ತರಿ ಹಾಕಿಸಿದ್ದರು.
ಈ ಚಿತ್ರದಲ್ಲಿ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರೆ, ಕನ್ನಡದ ಹೆಮ್ಮೆಯ ನಟ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೇಂದು, ಬೊಮ್ಮನ್ ಇರಾನಿ, ರವಿ ಕಿಶನ್, ವಿಜಿ ಚಂದ್ರಶೇಖರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ, (ಏಜೆನ್ಸೀಸ್).