ತಮಿಳಿಗೆ ಪಾವನಾ ಗೌಡ; ಕನ್ನಡಕ್ಕೂ ಡಬ್​ ಆಗಿ ಬಿಡುಗಡೆಯಾಗುತ್ತಿದೆ 'ವಿ3'

Pavana Gowda
Published on

ಬೆಂಗಳೂರು: ಶುಕ್ರವಾರ (ಜ.6) ಎಂಟು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅದರ ಜತೆಗೆ ತಮಿಳಿನಿಂದ ಕನ್ನಡಕ್ಕೆ ಡಬ್​ ಆದ ಚಿತ್ರವೂ ಸೇರಿಕೊಂಡಿದೆ. ಅದೇ 'ವಿ3'. ವಿಶೇಷವೆಂದರೆ, ಈ ಚಿತ್ರದಲ್ಲಿ ಸ್ಯಾಂಡಲ್​ವುಡ್​ ನಟಿ ಪಾವನಾ ಗೌಡ ನಟಿಸಿರುವುದು.

'ಆಟಗಾರ', 'ತೂತು ಮಡಿಕೆ', 'ಸದ್ದು ವಿಚಾರಣೆ ನಡೆಯುತ್ತಿದೆ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಪಾವನಾ ಗೌಡ ಇದೀಗ ತಮಿಳಿನಲ್ಲಿ 'ವಿ3' ಎಂಬ ಚಿತ್ರದಲ್ಲಿ ನಟಿಸಿದ್ದು, ಇಂದು ಬಿಡುಗಡೆಯಾಗುತ್ತಿದೆ. ಕನ್ನಡದ 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್​ಗೆ ನಾಯಕಿಯಾಗಿ ಅಭಿನಯಿಸಿದ್ದ ವರಲಕ್ಷ್ಮೀ ಶರತ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ 'ಆಡುಕುಲಂ' ನರೆನ್, ಈಸ್ಟರ್ ಅನಿಲ್ ಮುಂತಾದವರು ನಟಿಸಿದ್ದಾರೆ.

ನೈಜ ಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುವ ಮಗಳ ಜೀವನದಲ್ಲಿ ಒಂದು ಕೆಟ್ಟ ಘಟನೆ ನಡೆಯುತ್ತದೆ. ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ಅವಳ ಬದುಕು, ಗೊತ್ತು ಗುರಿ ಇಲ್ಲದಂತೆ ಆಗುತ್ತದೆ. ಐಎಎಸ್ ವರಲಕ್ಷ್ಮಿ ನಡೆಸುವ ತನಿಖೆಯಿಂದ ಈ ಕುಟುಂಬಕ್ಕೆ ನ್ಯಾಯ ಸಿಗಬಹುದಾ ಎನ್ನುವುದೇ ಈ ಚಿತ್ರದ ಕಥೆ.

ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ಅಮುದನ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net