ನನಸಾಗದ ಪವನ್ ಕನಸು ... ಪೊಲೀಸ್ ಆಗಬೇಕು ಅಂತ ಹೊರಟು ಡೈರೆಕ್ಟರ್ ಆದ್ರು

Pawan Wodeyar
Published on

ಎಲ್ಲರಿಗೂ ಜೀವನದಲ್ಲಿ ಹಾಗಾಗಬೇಕು, ಹೀಗಾಗಬೇಕು ಅಂತ ಆಸೆ ಇದ್ದೇ ಇರುತ್ತದೆ. ಆದರೆ, ಕೊನೆಗೆ ಆಗೋದು ಇನ್ನೇನೋ? ಈಗ್ಯಾಕೆ ಈ ಮಾತು ಅಂತೀರಾ? ನಟ-ನಿರ್ದೇಶಕ ಪವನ್ ಒಡೆಯರ್‌ಗೆ ಪೊಲೀಸ್ ಆಗಬೇಕು ಅಂತ ಆಸೆ ಇತ್ತಂತೆ. ಆದರೆ, ಅವರು ಈಗೇನಾಗಿದ್ದಾರೆ ಅನ್ನೋದು ಗೊತ್ತೇ ಇದೆ.

ಭಾನುವಾರ ತಮ್ಮ ಹಳೆಯ ಫೋಟೋವೊಂದನ್ನು ಶೇರ್ ಮಾಡಿರುವ ಪವನ್, ‘ಇದು ನಾನು. ನನ್ನ ಮೊದಲ ಕಿರುಚಿತ್ರ ಮಾಡುವಾಗ ಈ ಚಿತ್ರ ತೆಗೆದಿದ್ದು. ನನಗೆ ಪೊಲೀಸ್ ಆಗಬೇಕು ಅಂತ ಬಹಳ ಆಸೆ ಇತ್ತು. ಆದರೆ, ಪೊಲೀಸ್ ಆಗಬೇಕು ಎನ್ನುವ ನನ್ನ ಕನಸು ನನಸಾಗಲೇ ಇಲ್ಲ’ ಎಂದು ಪವನ್ ಒಡೆಯರ್ ಹೇಳಿಕೊಂಡಿದ್ದಾರೆ.

ಅಂದಹಾಗೆ, ಸಿನಿಮಾ ಕ್ಷೇತ್ರಕ್ಕೆ ಬರುವುದಕ್ಕಿಂತ ಮುನ್ನ ಪವನ್ ಸ್‌ಟಾವೇರ್ ಇಂಜಿನಿಯರ್ ಆಗಿದ್ದರು. ಸಿನಿಮಾ ಕ್ಷೇತ್ರ ಸೆಳೆದಿದ್ದರಿಂದ, ಕೆಲಸ ಬಿಟ್ಟು ಯೋಗರಾಜ್ ಭಟ್ ಕ್ಯಾಂಪಿಗೆ ಸೇರಿದರು. ಅಲ್ಲೊಂದಿಷ್ಟು ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ ನಂತರ, ಕೋಮಲ್ ಅಭಿನಯದ ‘ಗೋವಿಂದಾಯ ನಮಃ’ ಮೂಲಕ ಸ್ವತಂತ್ರ ನಿರ್ದೇಶಕರಾದರು. ಆಮೇಲಿನದ್ದೆಲ್ಲಾ ಗೊತ್ತೇ ಇದೆ. ಸದ್ಯ ‘ರೆಮೋ’ ಎಂದು ಚಿತ್ರದ ಚಿತ್ರೀಕರಣ ಮುಗಿಸಿರುವ ಪವನ್, ಇದೀಗ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net