ಶಾರುಖ್​ ಚಿತ್ರ 500 ಕೋಟಿ ರೂ. ಗಳಿಕೆ ಮಾಡೋದ್ರಲ್ಲಿ ದೊಡ್ಡದೇನಿದೆ? ವರ್ಮ ಪ್ರಶ್ನೆ

Pathaan 20
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರವು ಕಳೆದ ಆರು ದಿನಗಳಲ್ಲಿ ಜಗತ್ತಿನಾದ್ಯಂತ 500 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸಾಕಷ್ಟು ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್​ ಖಾನ್​ ಮತ್ತು ಬಾಲಿವುಡ್​ಗೆ ಹೊಸ ಉಸಿರು ನೀಡಿದೆ. ಈ ಚಿತ್ರದ ಯಶಸ್ಸಿನಿಂದಾಗಿ ಪ್ರೇಕ್ಷಕರು ಬಾಲಿವುಡ್​ ಮಂದಿಯನ್ನು ಕೈಬಿಟ್ಟಿಲ್ಲ ಎಂದು ಸಾಬೀತಾಗಿದೆ.

ಆದರೆ, ಶಾರುಖ್​ ಚಿತ್ರವೊಂದು 500 ಕೋಟಿ ರೂ. ಗಳಿಗೆ ಮಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಹಿರಿಯ ನಿರ್ದೇಶಕ ರಾಮ್​ ಗೋಪಾಲ್​ ವರ್ಮ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಇದರಲ್ಲಿ ವಿಶೇಷತೆ ಏನಿದೆ ಹೇಳಿ? ಯಶ್​ ಎಂಬ ಅನಾಮಿಕನೊಬ್ಬ 'ಕೆಜಿಎಫ್​ 2' ಚಿತ್ರದ ಮೂಲಕ 500 ಕೋಟಿ ರೂ. ಬಿಜಿನೆಸ್​ ಮಾಡಿದರೆ, ಶಾರುಖ್​ ಖಾನ್​ ಎಂಬ ಸ್ಟಾರ್​ ನಟ ಈ ತರಹದ ಬಿಜಿನೆಸ್​ ಮಾಡುವುದರಲ್ಲಿ ಯಾವುದೇ ದೊಡ್ಡಸ್ತಿಕೆ ಇಲ್ಲ' ಎಂದಿದ್ದಾರೆ.

ಯಶ್​ಗಿಂತ ಶಾರುಖ್​ ದೊಡ್ಡ ಹೆಸರು. ಯಶ್​ ಆ ತರಹದ್ದೊಂದು ಬಿಜಿನೆಸ್​ ಮಾಡಬಹುದಾದರೆ, 'ಕಾಂತಾರ' ಎಂಬ ಚಿತ್ರ ದೊಡ್ಡ ಹಿಟ್​ ಆಗಬಹುದಾದರೆ ಅಥವಾ ಅಲ್ಲು ಅರ್ಜುನ್​ ಹೆಸರೇ ಗೊತ್ತಿಲ್ಲದಿರುವವರು 'ಪುಷ್ಪ' ಚಿತ್ರ ನೋಡಿ ಗೆಲ್ಲಿಸುವುದಾದರೆ, ಮೊದಲಿನ ತರಹ ಈ ಸ್ಟಾರ್​ಗಿರಿ ಎಲ್ಲ ಇನ್ನೂ ಉಳಿದಿದೆಯೇ ಎಂಬ ಸಂಶಯ ಕಾಡುತ್ತದೆ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net