ಮಲಯಾಳಂ ಬ್ಯೂಟಿ ಪಾರ್ವತಿ ಮದುವೆ ಫೋಟೋ ವೈರಲ್! ಅಭಿಮಾನಿಗಳಿಗೆ ಬೇಸರ, ಇಲ್ಲಿದೆ ಅಸಲಿ ಸಂಗತಿ…​

Actress Parvathi
Published on

ತಿರುವನಂತಪುರಂ: ಮಲಯಾಳಂ ಬ್ಯೂಟಿ ಪಾರ್ವತಿ ಥಿರುವೊತ್ತು ಅವರನ್ನು ಕನ್ನಡಿಗರಿಗೆ ವಿಶೇಷವಾಗಿ ಪರಿಚಯಿಸಬೇಕಿಲ್ಲ. ದಿವಂಗತ ನಟ ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಮಿಲನ ಹಾಗೂ ಪೃಥ್ವಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ಪಾರ್ವತಿ ನಟಿಸಿದ್ದು, ತಮ್ಮ ನಟನೆಯಿಂದಲೇ ಒಳ್ಳೆಯ ಹೆಸರು ಮಾಡಿದ್ದಾರೆ.

ಸಿನಿಮಾ ಹೊರತುಪಡಿಸಿದರೆ, ಪಾರ್ವತಿ ಅವರು ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿನ ಕರಾಳತೆಯನ್ನು ನೇರವಾಗಿಯೇ ಬಹಿರಂಗಪಡಿಸುವ ಮೂಲಕ ಕೆಲವೊಮ್ಮೆ ಸುದ್ದಿಯಾಗಿದ್ದಾರೆ. ಅಲ್ಲದೆ, ಅನ್ಯಾಯ ನಡೆದಾಗ ಅದರ ವಿರುದ್ಧ ಧ್ವನಿ ಎತ್ತುವುದರಿಂದ ಕೆಲವೊಮ್ಮೆ ವಿವಾದದ ಕೇಂದ್ರ ಬಿಂದು ಸಹ ಆಗಿದ್ದಾರೆ. ಮಹಿಳಾ ಪರ ಹೋರಾಟಗಾರ್ತಿ ಎಂದರೆ ತಪ್ಪಾಗಲಾರದರು.

ಸದ್ಯ ಪಾರ್ವತಿ ಅವರಿಗೆ 36 ವರ್ಷ ವಯಸ್ಸು. ಇನ್ನೂ ಮದುವೆಯಾಗಿಲ್ಲ. ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ ಪಾರ್ವತಿ ಅವರ ಮದುವೆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಫೋಟೋ ನೋಡಿದವರೆಲ್ಲ ಪಾರ್ವತಿಗೆ ಯಾವಾಗ ಮದುವೆ ಆಯಿತು ಎಂದು ಕೇಳುತ್ತಿದ್ದಾರೆ. ಅಲ್ಲದೆ, ಫೋಟೋದಲ್ಲಿ ಪಾರ್ವತಿ ಜೋಡಿ ನೋಡಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಮಿಲನ ಸುಂದರಿ ಜೋಡಿ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಅಷ್ಟಕ್ಕೂ ಪಾರ್ವತಿ ನಿಜವಾಗಿಯೂ ಮದುವೆಯಾಗಿದ್ದಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಅಂದಹಾಗೆ ವೈರಲ್​ ಆಗುತ್ತಿರುವ ಮದುವೆ ಫೋಟೋ ನಿಜವಾದ ಮದುವೆಗೆ ಸಂಬಂಧಿಸಿದ್ದಲ್ಲ, ಅದು ಸಿನಿಮಾವೊಂದರ ಫೋಟೋ ಆಗಿದೆ. ಪಾರ್ವತಿ ಮತ್ತು ನಟ ಪ್ರಶಾಂತ್​ ಮುರಳಿ ನಟನೆಯ ಕ್ರಿಸ್ಟೋ ಟಾಮಿ ನಿರ್ದೇಶನದ "ಉಲ್ಲೋಜುಕ್ಕು" ಸಿನಿಮಾದ ಫೋಟೋ ಇದಾಗಿದೆ. ಈ ಸಿನಿಮಾದ ಪ್ರೋಮೋ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಪ್ರೋಮೋ ವಿಡಿಯೋದಲ್ಲಿ ನವವಿವಾಹಿತರ ನಡುವಿನ ಸಂಭಾಷಣೆಯನ್ನು ಪಾರ್ವತಿ ಮತ್ತು ಪ್ರಶಾಂತ್ ಮುರಳಿ ನಿರ್ವಹಿಸಿದ್ದಾರೆ. ಚಿತ್ರದ ಟೀಸರ್ ಇಂದು ಬಿಡುಗಡೆಯಾಗಲಿದೆ. ಆರ್‌ಎಸ್‌ವಿವಿ ಮತ್ತು ಮೆಕ್‌ಗಫಿನ್ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ರೋನಿ ಸ್ಕ್ರೂವಾಲಾ, ಹನಿ ಟ್ರೆಹಾನ್ ಮತ್ತು ಅಭಿಷೇಕ್ ಚೌಬೆ ನಿರ್ಮಿಸಿರುವ ಈ ಚಿತ್ರದ ಪ್ರೋಮೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಲಿವುಡ್​ ಸೂಪರ್​ ಸ್ಟಾರ್​ ಆಮೀರ್ ಖಾನ್ ಮತ್ತು ಸ್ಟಾರ್​ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರನ್ನೊಳಗೊಂಡ ತೀರ್ಪುಗಾರರ ತೀರ್ಪಿನಂತೆ 2018ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆದ ಬಿನಿಸ್ತಾನ್ ಇಂಡಿಯಾ ಚಿತ್ರಕಥೆ ಸ್ಪರ್ಧೆಯಲ್ಲಿ 25 ಲಕ್ಷ ರೂಪಾಯಿಗಳ ಪ್ರಥಮ ಬಹುಮಾನವನ್ನು ಗೆದ್ದ ಕ್ರಿಸ್ಟೋ ಟಾಮಿ ಅವರ ಚಿತ್ರಕತೆಯನ್ನು ಆಧರಿಸಿದ ಚಿತ್ರವೇ ಉಲ್ಲೋಜುಕ್ಕು. ಅದೇ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ ಲಪಟ ಲೇಡೀಸ್ ಕತೆ ಪಡೆದಿತ್ತು. ಈ ಸಿನಿಮಾವನ್ನು ಆಮೀರ್​ ಖಾನ್​ ನಿರ್ಮಿಸಿದ್ದಾರೆ.

ಕ್ರಿಸ್ಟೋ ಟಾಮಿ ಅವರ ಕಿರುಚಿತ್ರ ಅಕಾವ್ಕವಿ 63ನೇ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ನಾನ್-ಫೀಚರ್ ವಿಭಾಗದಲ್ಲಿ ಅತ್ಯುತ್ತಮ ನಿರ್ದೇಶಕರಿಗಾಗಿ ಸ್ವರ್ಣ ಕಮಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕಳೆದ ವರ್ಷ ಕ್ರಿಸ್ಟೋ ಟಾಮಿ ನಿರ್ದೇಶನದ ಕರಿ ಮತ್ತು ಸೈನೈಡ್ ಎಂಬ ನೆಟ್ ಮಿಕ್ಸ್ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ಇದೀಗ ಉಲ್ಲೋಜುಕ್ಕು ಸಿನಿಮಾದ ಮೇಲೆ ನಿರೀಕ್ಷೆ ತುಂಬಾ ಇದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net