ರಾಘವ-ಪರಿ ವಿವಾಹ; ಲೀಲಾ ಪ್ಯಾಲೆಸ್‌ನಲ್ಲಿ ಅದ್ದೂರಿ ಸಮಾರಂಭ

parineeti
Published on

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಛಡ್ಡಾ ಜೋಡಿ ಭಾನುವಾರ(ಸೆ. 24) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪ್ರೇಮದಲ್ಲಿದ್ದ ಈ ಯುವ ಜೋಡಿಯ ನಿಶ್ಚಿತಾರ್ಥ ಮೇ. 13ರಂದು ನೆರವೇರಿತ್ತು. ಈಗ ಸೆ. 17ರಿಂದ ಉದಯಪುರದ ಲೀಲಾ ಪ್ಯಾಲೆಸ್‌ನಲ್ಲಿ ಮದುವೆ ಶಾಸಗಳು ಶುರುವಾಗಿದ್ದು, ಶನಿವಾರ(ಸೆ.23) ಹಾಗೂ ಭಾನುವಾರದಂದು ಪಂಜಾಬಿ ಶೈಲಿಯಲ್ಲಿ ಅದ್ದೂರಿ ವಿವಾಹ ಕಾರ್ಯಕ್ರಮ ನಡೆದಿದೆ.

ಇಡೀ ಮುದುವೆಯ ಕಾರ್ಯಕ್ರಮವು ‘ಡಿವೈನ್ ಪ್ರಾಮಿಸ್- ಪರ್ಲ್ ವೈಟ್ ಇಂಡಿಯನ್ ವೆಡ್ಡಿಂಗ್’ ಎಂಬ ಥೀಮ್‌ನಲ್ಲಿದ್ದು, ಅದಕ್ಕೆ ತಕ್ಕಂತೆ ಎಲ್ಲೆಡೆ ಅಲಂಕಾರಗಳನ್ನು ಶ್ವೇತ ಬಣ್ಣದಿಂದ ಮಾಡಲಾಗಿದೆ. ಕುಟುಂಬದ ಹಿರಿಯರ ಸಮ್ಮುಖದಲ್ಲಿ ಈ ಮದುವೆ ನಡೆಯುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್, ಆದಿತ್ಯಾ ಠಾಕ್ರೆ, ಹರ್ಭಜನ್ ಸಿಂಗ್, ಮನೀಶ್ ಮಲ್ಹೋತ್ರಾ ಸೇರಿ ಹಲವು ರಾಜಕೀಯ ಮುಖಂಡರು ಹಾಗೂ ಸಿನಿಮಾ ತಾರೆಯರು ಆಗಮಿಸಿ ಯುವ ಜೋಡಿಗೆ ಶುಭಕೋರಿದ್ದಾರೆ.

ಇನ್ನು ಪರಿಣೀತಿ ಸಂಬಂಧಿ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದೇ ಇದ್ದಿದ್ದರಿಂದ ಜಾಲತಾಣದಲ್ಲಿ ಶುಭ ಹಾರೈಸಿ ಬರೆದಿದ್ದಾರೆ. ಈ ಸಂಭ್ರಮವೆಲ್ಲ ಮುಗಿದ ಬಳಿಕ ಸೆ.30ರಂದು ರಾಘವ್ ಹುಟ್ಟೂರು ಚಂಡೀಘಡದಲ್ಲಿ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ ಎಂದು ಹೇಳಲಾಗಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net