

ಚೆನ್ನೈ: ಬಹುಭಾಷ ನಟಿ ಹಾಗೂ ಬಾಹುಬಲಿ ಚಿತ್ರದ ಶಿವಗಾಮಿ ಖ್ಯಾತಿಯ ರಮ್ಯಾ ಕೃಷ್ಣನ್ ಅವರ ಕಾರಿನಲ್ಲಿ ಶನಿವಾರ ಸುಮಾರು 100ಕ್ಕೂ ಹೆಚ್ಚು ಮದ್ಯದ ಬಾಟಲ್ಗಳು ಪತ್ತೆಯಾಗಿದ್ದು, ಚೆನ್ನೈ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಮ್ಮಲಪುರಂನಿಂದ ಚೆನ್ನೈಗೆ ತೆರಳುವಾಗ ಮಾರ್ಗ ಮಧ್ಯದ ಕನಥೂರಿನ ಚೆಂಕಲ್ಪೇಟೆಯ ಚೆಕ್ಪೋಸ್ಟ್ನಲ್ಲಿ ಕಾರು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ 96 ಬಿಯರ್ ಮತ್ತು 8 ವೈನ್ ಬಾಟಲ್ಗಳನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಸೆಲೆಬ್ರಿಟಿಗಳ ಕಿಚನ್ ಕರಾಮತ್ತು
ಚಾಲಕನನ್ನು ಬಂಧಿಸಲಾಗಿದ್ದು, ಕನಥೂರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲದೆ ರಮ್ಯಾ ಕೃಷ್ಣನ್ ಹಾಗೂ ಆಕೆಯ ಸಹೋದರಿ ವಿನಯ ಕೃಷ್ಣನ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಚಾಲಕನಿಗೆ ಜಾಮೀನು ಪಡೆದಿದ್ದಾರೆ ಎಂಬ ಮಾಹಿತಿಯು ಇದೆ.
ಸಿನಿಮಾ ವಿಚಾರಕ್ಕೆ ಬಂದರೆ ಬಾಹುಬಲಿಯ ನಂತರ ಇಡೀ ಭಾರತ ಚಿತ್ರರಂಗದಲ್ಲಿ ಶಿವಗಾಮಿ ಎಂದೇ ಖ್ಯಾತಿಯಾದ ರಮ್ಯಾ ಕೃಷ್ಣನ್ ಅವರು ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ವೆಬ್ಸರಣಿ ಕ್ವೀನ್ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದೆ. (ಏಜೆನ್ಸೀಸ್)