ವಿದೇಶಿ ನೆಲದಲ್ಲಿ ಸ್ವದೇಶಿ ಹವಾ: ಆಸ್ಕರ್ ರೆಡ್​ ಕಾರ್ಪೆಟ್​ನಲ್ಲಿ ಹಾಲಿವುಡ್​ ಸ್ಟಾರ್​ಗಳಿಗೆ ತೆಲಂಗಾಣ ಜ್ಯುವೆಲರಿ ಟಚ್​! Oscars red carpet

ವಿದೇಶಿ ನೆಲದಲ್ಲಿ ಸ್ವದೇಶಿ ಹವಾ: ಆಸ್ಕರ್ ರೆಡ್​ ಕಾರ್ಪೆಟ್​ನಲ್ಲಿ ಹಾಲಿವುಡ್​ ಸ್ಟಾರ್​ಗಳಿಗೆ ತೆಲಂಗಾಣ ಜ್ಯುವೆಲರಿ ಟಚ್​! Oscars red carpet
ವಿದೇಶಿ ನೆಲದಲ್ಲಿ ಸ್ವದೇಶಿ ಹವಾ: ಆಸ್ಕರ್ ರೆಡ್​ ಕಾರ್ಪೆಟ್​ನಲ್ಲಿ ಹಾಲಿವುಡ್​ ಸ್ಟಾರ್​ಗಳಿಗೆ ತೆಲಂಗಾಣ ಜ್ಯುವೆಲರಿ ಟಚ್​! Oscars red carpet
Published on
ಲಾಸ್​ ಏಂಜಲೀಸ್​: 98ನೇ ಆಸ್ಕರ್​ 2026 ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಈ ವರ್ಷ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿದ್ದು, ಹಾಲಿವುಡ್‌ನ ಸ್ಟಾರ್​ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಅವಾರ್ಡ್​ಗೆ ನಾಮಿನಿ ಆಗಿರುವ ತಾರೆಯರು ಡಾಲ್ಬಿ ಥಿಯೇಟರ್‌ನ ರೆಡ್​ ಕಾರ್ಪೆಟ್​ನಲ್ಲಿ ( Oscars red carpet ) ಕಂಗೊಳಿಸಿದರು.   
ಈ ಅದ್ಧೂರಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಹಾಲಿವುಡ್​ನ ಬ್ರಾಂಡಿ ಕಾರ್ಲೈಲ್ ಮತ್ತು ಕ್ಯಾತ್ರಿನ್​ ಶೆಫರ್ಡ್​ ಭಾರತದಲ್ಲಿ ಡಿಸೈನ್​ ಮಾಡಲಾದ ಆಭರಣಗಳನ್ನು ಧರಿಸಿ ಬಂದಿದ್ದು ಹಲವರನ್ನು ಬೆರಗುಗೊಳಿಸಿತು. ಚಿನ್ನವನ್ನು ಬಳಸಿ ತಯಾರಿಸಲ್ಪಟ್ಟ ಹ್ಯಾಂಡ್​ಮೇಡ್​​ ಮತ್ತು ಪಚ್ಚೆಯ ಸುತ್ತ ರೂಪಿಸಲಾದ ಪೇವ್-ಸೆಟ್ ವಜ್ರಗಳ ಆಭರಣಗಳು ಇಂಗ್ಲಿಷ್​ ಕಲಾವಿದರ ಲುಕ್​ ಅನ್ನು ಇನಷ್ಟು ಅದ್ಭುತಗೊಳಿಸಿದ್ದು ವಿಶೇಷ. ಈ ಹ್ಯಾಂಡ್​ಮೇಡ್​ ಜ್ಯುವೆಲರಿ ಹಿಂದೆ ತೆಲಂಗಾಣದ ಕುಶಲಕರ್ಮಿಗಳ 100ಕ್ಕೂ ಹೆಚ್ಚು ಗಂಟೆಗಳ ಕರಕುಶಲತೆಯ ಶ್ರಮವಿದೆ.
ಇನ್ನು ಕ್ಯಾಥರೀನ್ ಶೆಫರ್ಡ್ ಕೊರಳಿನಲ್ಲಿ ಕಾಣಿಸಿಕೊಂಡ ಉದ್ದದ ವಜ್ರದ ನೆಕ್ಲೆಸ್​, ಆಯ್ದ ಡೈಮೆಂಡ್​ಗಳಿಂದ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ವಿದೇಶಿ ನೆಲದಲ್ಲಿ ಹಾಲಿವುಡ್​ ಸ್ಟಾರ್​ಗಳು ನಮ್ಮ ದೇಶಿಯ ಜ್ಯುವೆಲರಿ ಧರಿಸಿ ಬಂದಿದ್ದು ಸ್ಥಳದಲ್ಲಿದ್ದ ಫೋಟೋಗ್ರಾಫರ್​ಗಳು ಹಾಗೂ ಇತರೆ ತಾರೆಯರ ಕಣ್ಣು ಕುಕ್ಕುವಂತಿತ್ತು.
98ನೇ ಅಕಾಡೆಮಿ ಪ್ರಶಸ್ತಿ ಸೋಮವಾರ ಬೆಳಗ್ಗೆ ಲಾಸ್​ ಏಂಜಲೀಸ್​ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆದಿದೆ. ನಟಿ ಪ್ರಿಯಾಂಕ ಚೋಪ್ರಾ ಆಸ್ಕರ್​ ಪ್ರಶಸ್ತಿ ವಿಜೇತ ಜೇವಿಯರ್​ ಬಾರ್ಡೆಮ್​ ಜೊತೆ ಸೇರಿ ಅಂತರಾಷ್ಟ್ರೀಯ ಚಲನಚಿತ್ರಕ್ಕಾಗಿ ಆಸ್ಕರ್​ ಪ್ರಶಸ್ತಿ ಪ್ರಧಾನ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net