ಬದುಕು ಒಂದು ಹೋರಾಟ … 'ಜಮಾಲಿ ಗುಡ್ಡ'ದ ಟ್ರೈಲರ್​ ಬಿಡುಗಡೆ

Once Upon A Time In Jamaligudda 3
Published on

ಬೆಂಗಳೂರು: ಧನಂಜಯ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿರುವ 'Once Upon A Time In ಜಮಾಲಿಗುಡ್ಡ' ಡಿ. 30ಕ್ಕೆ ಬಿಡುಗಡೆಯಾಗುತ್ತಿದೆ. ಬಿಡುಗಡೆಗೆ 15 ದಿನ ಇದ್ದರೂ ಟ್ರೇಲರ್​ ಇಲ್ಲ, ಹಾಡಿಲ್ಲ ಎನ್ನುತ್ತಿದ್ದವರಿಗೆ ಚಿತ್ರತಂಡದವರು ಕೊನೆಗೂ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಒಂದು ಸಮಾರಂಭದಲ್ಲಿ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರವನ್ನು ನಿರ್ದೇಶಿಸಿರುವು ಕುಶಾಲ್ ಗೌಡ. ಇದೊಂದು ಕಾಲ್ಪನಿಕ ಪ್ರಪಂಚ ಎನ್ನುವ ಅವರು, 'ಇದೊಂದು ಭಾವನಾತ್ಮಕ ಪಯಣವೂ ಹೌದು. ಧನಂಜಯ ಹಾಗೂ ಬೇಬಿ‌ ಪ್ರಾಣ್ಯ ನಡುವಿನ ಸನ್ನಿವೇಶಗಳು ಸುಂದರವಾಗಿ ಮೂಡಿಬಂದಿದೆ. 95-96ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದು. ಚಿಕ್ಕಮಗಳೂರಿನ ಬಾಬಾಬುಡನಗಿರಿಯ ಸೊಬಗು ಚಿತ್ರದ ಮತ್ತೊಂದು ಹೈಲೆಟ್. ಅಲ್ಲೇ ಹೆಚ್ವಿನ ಚಿತ್ರೀಕರಣ ನಡೆದಿದೆ' ಎನ್ನುತ್ತಾರೆ ಕುಶಾಲ್,

ಇದೊಂದು ಫೀಲ್ ಗುಡ್ ಸಿನಿಮಾ ಎನ್ನುವ ಧನಂಜಯ್, 'ಕುಶಾಲ್ ಗೌಡ ಅವರು ಈ ಚಿತ್ರಕ್ಕಾಗಿ ಫೇಸ್ ಬುಕ್ ಮೂಲಕ ನಿರ್ಮಾಪಕರನ್ನು ಹುಡುಕಿದರು. ಆಗ ಶ್ರೀಹರಿ ಸಿಕ್ಕರು. I ಈ ಚಿತ್ರದ ಚಿತ್ರೀಕರಣವಾಗುವ ನಾನು ಬಹಳ ಬಿಜಿ ಇದ್ದೆ. ಹೆಚ್ಚಿನ ಚಿತ್ರೀಕರಣ ಬಾಬಾಬುಡನಗಿರಿಯಲ್ಲೇ ನಡೆಯಬೇಕಿತ್ತು. ಅದರಲ್ಲೂ ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ವಾತಾವರಣದಲ್ಲೇ ಚಿತ್ರೀಕರಣ ನಡೆಯಬೇಕಿಗಿದ್ದರಿಂದ ಬೇಗ ಈ ಚಿತ್ರೀಕರಣದಲ್ಲಿ ಪಾಲ್ಗೊಂಡೆ' ಎನ್ನುತ್ತಾರೆ ಧನಂಜಯ್​.

'Once Upon A Time In ಜಮಾಲಿಗುಡ್ಡ' ಚಿತ್ರ ನನ್ನ ವೃತ್ತಿಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾವಾಗಲಿದೆ ಎಂದೇ ಮಾತು ಪ್ರಾರಂಭಿಸುವ ಅದಿತಿ, 'ಚಿತ್ರದ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಎಷ್ಟೋ ಕಡೆ ಸಹಜವಾಗಿ ಅತ್ತಿದ್ದು ಇದೆ. ಅಂತಹ ಅದ್ಭುತ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಧನಂಜಯ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ' ಎಂದರು ನಟಿ ಅದಿತಿ ಪ್ರಭುದೇವ.

'Once Upon A Time In ಜಮಾಲಿಗುಡ್ಡ' ಚಿತ್ರದಲ್ಲಿ ಭಾವನಾ, ಪ್ರಕಾಶ್​ ಬೆಳವಾಡಿ, ಯಶ್ ಶೆಟ್ಟಿ, ತ್ರಿವೇಣಿ ರಾವ್​, ದಿವ್ಯ, ಬೇಬಿ ಪ್ರಾಣ್ಯ ಮುಂತಾದವರು ನಟಿಸಿದ್ದು, ಚಿತ್ರಕ್ಕೆ ಕಾರ್ತಿಕ್ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಅವರ ಸಂಗೀತವಿದೆ. ಇನ್ನು, ಅನೂಪ್​ ಸೀಳಿನ್​ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net