ಗುರೂಜಿ ಅವರೊಂದಿಗೆ ಸಾವಿರಾರು ಭಕ್ತರು ಸೇರಿದ್ದ ದರ್ಶನ ಸ್ಥಳಕ್ಕೆ ತೆರಳಿದ್ದರು. ನಾನು ಹೋದರೆ ದೊಡ್ಡ ಜನಸಮೂಹವೇ ನನ್ನತ್ತ ಬರಬಹುದು, ಫೋಟೋ, ಆಟೋಗ್ರಾಫ್ ತೆಗೆದುಕೊಳ್ಳಬಹುದು ಎಂದು ಭಾವಿಸಿದ್ದೆ. ಅಲ್ಲಿ ತಮಿಳುನಾಡಿನ ಸಾಕಷ್ಟು ಜನ ಇರುವುದನ್ನೂ ನಾನು ಗಮನಿಸಿದ್ದೆ.ಆದರೆ ಅಲ್ಲಿ ನಡೆದದ್ದೇ ಬೇರೆ! ರಜನಿಕಾಂತ್ ನಿಜ ಹೇಳಬೇಕೆಂದರೆ, ಅಲ್ಲಿ ನೆರೆದಿದ್ದವರಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ನನ್ನ ಕಡೆ ಕಣ್ಣೆತ್ತಿ ನೋಡಲಿಲ್ಲ. ನಾನು ಮಾತ್ರ ಎಲ್ಲರಿಗೂ ಕೈ ಬೀಸುತ್ತಿದ್ದೆ, ಆದರೆ ಯಾರೂ ನನ್ನನ್ನು ಗಮನಿಸಲೇ ಇಲ್ಲ. ನಾನು ನನ್ನ ಜೀವನದಲ್ಲಿ ಎಷ್ಟೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ, ಆದರೆ ಆ ಒಂದು ಘಟನೆ ನನ್ನ ಅಹಂಕಾರವನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡಿತು.ಎಂದು ಹೇಳಿ ನಕ್ಕರು.