ಈ ಬಾರಿಯ ಬಿಗ್​ಬಾಸ್ ಮನೆ ಪ್ರವೇಶಿಸಲು ತೆಲುಗು ನಟರಿಗಿಲ್ಲ ಅನುಮತಿ: ಕಾರಣ ಏನಿರಬಹುದು?

Nagarjuna
Published on

ಹೈದರಾಬಾದ್​: ವಿವಾದಿತ ರಿಯಾಲಿಟಿ ಶೋ ಎಂದೇ ಖ್ಯಾತಿಯಾಗಿರುವ ಬಿಗ್​ಬಾಸ್​ ಶೋನ ನಾಲ್ಕನೇ ಆವೃತ್ತಿ ಇನ್ನು ಕೆಲವೇ ದಿನಗಳಲ್ಲಿ ತೆಲುಗಿನಲ್ಲಿಮ ಶುರುವಾಗಲಿದೆ. ಕಳೆದ ಬಾರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದ ನಾಗಾರ್ಜುನ ಅವರೇ ಈ ಬಾರಿಯೂ ಶೋ ನಡೆಸಿಕೊಡುವ ಜವಬ್ದಾರಿಯನ್ನು ಹೊತ್ತಿದ್ದಾರೆ.

ಮೂಲಗಳ ಪ್ರಕಾರ ಈ ಬಾರಿ ತೆಲುಗು ಬಿಗ್​ಬಾಸ್​ ಮನೆಗೆ ಪ್ರಿಯಾ ವಾಡ್ಲಮನಿ, ಅಪೂರ್ವ, ಯಾಮಿನಿ ಭಾಸ್ಕರ್​, ಕಿರುತೆರೆ ಕಲಾವಿದ ಸೈಯದ್​ ಸೊಹೈಲ್​, ಆ್ಯಂಕರ್​ ಪ್ರಶಾಂತಿ, ಸಿಂಗರ್​ ನೋಲ್​ ಸೀನ್​, ನಟರಾದ ನಂದು, ಕರಾಟೆ ಕಲ್ಯಾಣಿ, ಜಬರ್​ದಸ್ತ್​ ಅವಿನಾಶ್​, ಯುಟ್ಯೂಬರ್​ ಮೆಹ್ಬೂಬ್​ ದಿಲ್ಸೆ, ಆ್ಯಂಕರ್​ಗಳಾ ಜೋರ್ದಾರ್​ ಸುಜಾತ, ಅರಿಯಾನ ಗ್ಲೋರಿ, ಅಖಿಲ್​ ಸಾರ್ಥಕ್​ ಮತ್ತು ನಟಿ ಪೂನಮ್ ಬಜ್ವಾ ಪ್ರವೇಶಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ​

ಕೆಲವು ದಿನಗಳ ಹಿಂದೆ ತೆಲುಗು ನಟ ತರುಣ್​ ಸಹ ಸ್ಪರ್ಧಿಗಳಲ್ಲಿ ಒಬ್ಬರೆಂದು ವದಂತಿಯೊಂದು ಹರಿದಾಡಿತ್ತು. ಆದರೆ, ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಟ ಶೋನಲ್ಲಿ ಭಾಗವಹಿಸುತ್ತಿಲ್ಲ ಮತ್ತು ನನಗೆ ಆಸಕ್ತಿಯೂ ಇಲ್ಲ ಎಂದಿದ್ದಾರೆ.

ಅಂದಹಾಗೆ ನಾಲ್ಕನೇ ಆವೃತ್ತಿ ಮುಂದಿನ ತಿಂಗಳಿಂದ ಆರಂಭವಾಗಲಿದೆ. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಈ ಬಾರಿ ಶೋನಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗಲಿವೆ. ಈಗಾಗಲೇ ಸ್ಪರ್ಧಿಗಳನ್ನು ಕ್ವಾರಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಇದೆ. ಅಚ್ಚರಿಯೆಂದರೆ ಈ ಬಾರಿ ಬಿಗ್​ಬಾಸ್​ ಮನೆ ಪ್ರವೇಶಿಸಲು ಟಾಲಿವುಡ್​ ತಾರೆಯರಿಗೆ ಅನುಮತಿ ನೀಡುವುದಿಲ್ಲ ಎಂಬ ವರದಿಗಳು ಕೇಳಿಬರುತ್ತಿವೆ.

ಕಳೆದ ಮೂರು ಶೋಗಳಲ್ಲಿ ಚಲನಚಿತ್ರ ನಟರು ತಮ್ಮ ಚಿತ್ರಗಳ ಪ್ರಚಾರಕ್ಕಾಗಿ ಬಿಗ್​ಬಾಸ್ ಮನೆಗೆ ಪ್ರವೇಶಿಸಿ ನಿರೂಪಕರೊಂದಿಗೆ ಮಾತ್ರವಲ್ಲದೆ ಸ್ಪರ್ಧಿಗಳ ಜತೆಯಲ್ಲಿಯೂ ಸಂವಹನ ನಡೆಸುತ್ತಿದ್ದರು. ಆದರೆ, ಈ ಬಾರಿ ಈ ರೀತಿ ಯಾವುದೇ ಚಟುವಟಿಕೆ ನಡೆಯುವುದಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net