

ಜುಲೈ ತಿಂಗಳ ಬಂತೆಂದರೆ ಸಾಕು, ಕನ್ನಡ ಚಿತ್ರರಂಗದಲ್ಲಿ ಹುಟ್ಟುಹಬ್ಬದ ಸಂಭ್ರಮ ಮನೆಮಾಡುತ್ತದೆ. ಏಕೆಂದರೆ, ಈ ತಿಂಗಳು ಕನ್ನಡ ಚಿತ್ರರಂಗದ ಸಾಕಷ್ಟು ಜನಪ್ರಿಯ ನಟ-ನಟಿಯರು ಈ ತಿಂಗಳು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕಮಾಂಡೋ ಪರವಾಗಿ ಕಂಗನಾ ಬ್ಯಾಟಿಂಗ್!
ನಾಳೆ (ಜುಲೈ 02) ಗಣೇಶ್ ಅವರಿಂದ ಪ್ರಾರಂಭಿಸಿ, ಈ ತಿಂಗಳಲ್ಲಿ ಶಿವರಾಜಕುಮಾರ್, ಗಣೇಶ್, ರಿಷಭ್ ಶೆಟ್ಟಿ, ಯೋಗಿ, ಕೋಮಲ್, ಶ್ರೀನಗರ ಕಿಟ್ಟಿ, ಸಂಚಾರಿ ವಿಜಯ್, ರಾಕೇಶ್ ಅಡಿಗ, ಹರೀಶ್ ರಾಜ್, ರಿಷಭ್ ಶೆಟ್ಟಿ, ಸಾಯಿಕುಮಾರ್, ಹಿರಿಯ ನಿರ್ದೇಶಕ ಭಗವಾನ್, ಸಾಯಿಪ್ರಕಾಶ್ ಮಂಡ್ಯ ರಮೇಶ್, ಗೀತಾ, ಸಿಹಿಕಹಿ ಚಂದ್ರು ಸೇರಿದಂತೆ ಹಲವರ ಹುಟ್ಟುಹಬ್ಬ ಬರುತ್ತದೆ.
ಇನ್ನು ತಮ್ಮ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನಸ್ಸಿಗೆ ಹತ್ತಿರವಾಗಿರುವ ದಿವಂಗತ ಕಲ್ಪನಾ, ಕಲ್ಯಾಣ್ ಕುಮಾರ್, ಸೌಂದರ್ಯ, ನರಸಿಂಹರಾಜು ಸಹ ಹುಟ್ಟಿದ್ದು ಇದೇ ತಿಂಗಳಲ್ಲಿ.
ಆದರೆ, ಈ ಬಾರಿ ಕರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಸ್ಟಾರ್ ನಟರೆಲ್ಲಾ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಈ ಸಮಯದಲ್ಲಿ ಸಂಭ್ರಮ ಬೇಡ, ಎಲ್ಲಿದ್ದೀರೋ ಅಲ್ಲಿಂದಲೋ ಹರಸಿ-ಹಾರೈಸಿ ಎಂದು ಅಭಿಮಾನಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಗಣೇಶ್, ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ದೊಡ್ಡ ಪತ್ರ ಬರೆದು, ಹುಟ್ಟುಹಬ್ಬ ಆಚರಿಸುವುದಕ್ಕೆ ಇದು ಸೂಕ್ತ ಸಮಯವಲ್ಲವಾದ್ದರಿಂದ, ಈ ಬಾರಿ ಸಂಭ್ರಮಾಚರಣೆ ಬೇಡ ಎಂದು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಟಾರ್ ಕಲಾವಿದರು, ಹುಟ್ಟುಹಬ್ಬ ಆಚರಿಸಿಕೊಳ್ಳುವುದರಿಂದ ದೂರ ಉಳಿಯುವ ಸಾಧ್ಯತೆ ಇದೆ.