ಮಾಸ್ಕ್​ ಹಾಕಿಕೊಂಡೆ ರೊಮ್ಯಾನ್ಸ್​ ಮಾಡಿ ಎಂದ ನಿತ್ಯಾ ರಾಮ್​!!

NityaRam couple romance 24 MAR 20
Published on

ಬೆಂಗಳೂರು: ಕರೊನಾ ಹುಟ್ಟಿಸಿರುವ ಭೀತಿ ಅಷ್ಟಿಷ್ಟಲ್ಲ. ಅದ್ಯಾವ ಮಟ್ಟಿಗೆ ಅಂದರೆ, ಯಾರ ಮೇಲೂ ಈಗ ನಂಬಿಕೆ ಇಲ್ಲದಂತಾಗಿದೆ. ಅದರಲ್ಲೂ ಪ್ರೇಮಿಗಳು, ದಂಪತಿಗಳು ರೊಮ್ಯಾನ್ಸ್ ಮಾಡುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಹೀಗಿರುವಾಗಲೇ ಕೆಲ ತಿಂಗಳ ಹಿಂದಷ್ಟೇ ಮದುವೆಯಾದ ಕಿರುತೆರೆ ನಟಿ ನಿತ್ಯಾ ರಾಮ್​, ಕರೊನಾ ನಡುವೆಯೂ ರೊಮ್ಯಾನ್ಸ್ ಮಾಡುವುದು ಹೇಗೆ ಎಂಬುದಕ್ಕೆ ಫೋಟೋ ಮೂಲಕ ಉತ್ತರಿಸಿದ್ದಾರೆ.

ಹೌದು, ಸ್ಯಾಂಡಲ್​ವುಡ್​ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಅವರ ಅಕ್ಕ ನಿತ್ಯಾ ರಾಮ್​ ಇನ್​ಸ್ಟಾಗ್ರಾಂನಲ್ಲಿ ಪತಿ ಗೌತಮ್​ಗೆ ಮಾಸ್ಕ್​ ಹಾಕಿ ತಾವೂ ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಮುತ್ತು ಕೊಡುವ ಮೂಲಕ, ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದಿದ್ದಾರೆ.

ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೊಂದಿಷ್ಟು ಮಂದಿ ಸುರಕ್ಷತೆ ಮುಖ್ಯ ಎಂದರೆ, ಮತ್ತೊಂದಿಷ್ಟು ಮಂದಿ ಓವರ್​ ಆ್ಯಕ್ಟಿಂಗ್​ ಎಂದು ಕಿಚಾಯಿಸಿದ್ದಾರೆ. ಮತ್ತೆ ಕೆಲವರು 'ಇದನ್ನು ನೋಡಿದರೆ ಮಾಸ್ಕ್​ ಕಂಪನಿ ಓನರ್ ಸೂಸೈಡ್​ ಮಾಡಿಕೊಳ್ಳುವುದು ಗ್ಯಾರಂಟಿ' ಎಂದು ಕಮೆಂಟಿಸಿದ್ದಾರೆ. ಅಂದಹಾಗೆ, ಡಿಸೆಂಬರ್​ ತಿಂಗಳಲ್ಲಿ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net