ಎಕ್ಸ್​ಟ್ರಾ ಆರ್ಡಿನರಿ ಬದಲಾವಣೆ ! ನಿತಿನ್​, ಶ್ರೀಲೀಲಾ ಚಿತ್ರದ ರಿಲೀಸ್​ ಯಾವಾಗ?

01
Published on

ತೆಲುಗು ನಟ ನಿತಿನ್ ನಾಯಕನಾಗಿರುವ 32ನೇ ಸಿನಿಮಾ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’. ಈ ಚಿತ್ರದಲ್ಲಿ ಸದ್ಯ ಟಾಲಿವುಡ್‌ನಲ್ಲಿ ಹೆಚ್ಚು ಬಿಜಿಯಾಗಿರುವ ಕನ್ನಡದ ಹುಡುಗಿ ಶ್ರೀಲೀಲಾ ನಿತಿನ್‌ಗೆ ನಾಯಕಿಯಾಗಿದ್ದಾರೆ. ಈ ಹಿಂದೆ ಅಲ್ಲು ಅರ್ಜುನ್ ನಾಯಕನಾಗಿದ್ದ ‘ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ’ ಚಿತ್ರ ನಿರ್ದೇಶಿಸಿದ್ದ ವಕ್ಕಂತಂ ವಂಶಿ ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ, ಡಿ. 23ರಂದು ಸಿನಿಮಾ ರಿಲೀಸ್ ಎಂದು ಘೋಷಿಸಿತ್ತು. ಆದರೆ ಅಂದೇ ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’ ಮತ್ತು ಶಾರುಖ್ ಖಾನ್ ನಟಿಸುತ್ತಿರುವ ‘ಡುಂಕಿ’ ಚಿತ್ರಗಳು ತೆರೆಗೆ ಬರುತ್ತಿವೆ. ‘ಎಕ್ಸ್‌ಟ್ರಾ ಆರ್ಡಿನರಿ ಮ್ಯಾನ್’ ಕೂಡ ಪ್ಯಾನ್ ಇಂಡಿಯಾ ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ‘ಸಲಾರ್’ ಮತ್ತು ‘ಡುಂಕಿ’ ಜತೆ ಕ್ಲ್ಯಾಶ್ ತಪ್ಪಿಸಲು ಚಿತ್ರವನ್ನು ಎರಡು ವಾರ ಪ್ರಿ-ಪೋನ್ ಮಾಡಿಕೊಂಡಿದ್ದಾರೆ.

ಇದೀಗ ನಿತಿನ್, ಶ್ರೀಲೀಲಾ ಸಿನಿಮಾ ಡಿ. 23ರ ಬದಲು ಡಿ. 8ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net