ಲಿವರ್​ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಿರ್ದೇಶಕ ನಿಶಿಕಾಂತ್ ಕಾಮತ್​ ನಿಧನ

Nishikant Kamat
Published on

ಹಲವು ಯಶಸ್ವೀ ಸಿನಿಮಾಗಳನ್ನು ನೀಡಿದ್ದ ಖ್ಯಾತ ಬಾಲಿವುಡ್​ ನಿರ್ದೇಶಕ ನಿಶಿಕಾಂತ್​ ಕಾಮತ್​ (50) ನಿಧನರಾಗಿದ್ದಾರೆ. ಇವರು ಹಲವು ವರ್ಷಗಳಿಂದ ಯಕೃತ್ತಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದರು. ಹೈದರಾಬಾದ್​​ನ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ನಿಶಿಕಾಂತ್​ ಅವರಿಗೆ ಚಿಕಿತ್ಸೆ ಫಲಿಸಲಿಲ್ಲ.

ಇಂದು ಬೆಳಗ್ಗೆಯೇ ಒಮ್ಮೆ ನಿಶಿಕಾಂತ್​ ಕಾಮತ್​ ಅವರ ನಿಧನದ ಸುದ್ದಿ ಹರಿದಾಡಿತ್ತು. ಆದರೆ ನಂತರ ಅದೊಂದು ವದಂತಿ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಹೊರತು ಮೃತಪಟ್ಟಿಲ್ಲ ಎಂದು ಹೇಳಲಾಗಿತ್ತು. ನಂತರ ಸಂಜೆ ಹೊತ್ತಿಗೆ ಬಾಲಿವುಡ್​ ನಟ ರಿತೇಶ್​ ದೇಶ್​ಮುಖ್​ ಅವರು ಟ್ವಿಟರ್​​ನಲ್ಲಿ ನಿಶಿಕಾಂತ್​ ನಿಧನರಾಗಿದ್ದನ್ನು ಖಚಿತಪಡಿಸಿದರು. ನಾನು ನನ್ನ ಗೆಳೆಯನನ್ನು ತುಂಬ ಮಿಸ್​ ಮಾಡಿಕೊಳ್ಳುತ್ತೇನೆ ಎಂದು ಟ್ವೀಟ್​ ಮಾಡಿದ್ದರು. ಇದನ್ನೂ ಓದಿ: ಗುಂಜನ್​ ಜತೆ ನಾನೂ ಏರ್​ಫೋರ್ಸ್​​ನಲ್ಲಿದ್ದೆ, ನನ್ನನ್ಯಾಕೆ ತೋರಿಸಿಲ್ಲ; ಚಿತ್ರತಂಡದ ವಿರುದ್ಧ ಶ್ರೀವಿದ್ಯಾ ಆರೋಪ

ನಿಶಿಕಾಂತ್​ ನಿರ್ದೇಶನದಲ್ಲಿ ಮೂಡಿಬಂದ ಅಜಯ್​ ದೇವಗನ್ ಅಭಿನಯದ ದೃಶ್ಯಂ, ಇರ್ಫಾನ್​ ಖಾನ್​ ಅವರ ಮದಾರಿ ಸಿನಿಮಾಗಳು ಭರ್ಜರಿ ಹಿಟ್​ ಆಗಿದ್ದವು. ಹಾಗೇ ಜಾನ್​ ಅಬ್ರಾಹಂ ಅಭಿನಯದ ಫೋರ್ಸ್​, ರಾಕಿ ಹ್ಯಾಂಡ್​ ಸಿನಿಮಾಗಳನ್ನೂ ನಿರ್ದೇಶಿಸಿದ್ದಾರೆ. ನಿಶಿಕಾಂತ್​ ಅವರು ಮರಾಠಿ ಸಿನಿಮಾಗಳನ್ನೂ ನಿರ್ದೇಶಿಸಿ, ಸೈ ಎನಿಸಿಕೊಂಡವರಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net