ಕಾರ್ತಿಕೆಯಾ 2 ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್, ಪಲ್ಲವಿ ದಂಪತಿಗೆ ಗಂಡು ಮಗು ಜನನ

ನಿಖಿಲ್​
Published on

ಹೈದರಾಬಾದ್: ತೆಲುಗು ಚಿತ್ರರಂಗದ ನಟ ನಿಖಿಲ್ ಸಿದ್ಧಾರ್ಥ್ ಹಾಗೂ ಪಲ್ಲವಿ ಶರ್ಮಾ ದಂಪತಿಗೆ ಗಂಡು ಮಗು ಜನಿಸಿದೆ.

ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಪಲ್ಲವಿ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ ಎಂದು ನಟ ನಿಖಿಲ್ ಸಿದ್ಧಾರ್ಥ್ ಹೇಳಿದ್ದಾರೆ.

ನಟ ನಿಖಿಲ್​ ಸಿದ್ಧಾರ್ಥ್​ ಮಗನನ್ನು ಮುದ್ದಾಡುತ್ತಿರುವ ಪೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಕೆಲ ವಾರಗಳ ಹಿಂದೆ, ನಿಖಿಲ್ ತನ್ನ ಪತ್ನಿಗೆ ಆಯೋಜಿಸಿದ್ದ ಶ್ರೀಮಂತ ಕಾರ್ಯಕ್ರಮದ ಪೋಟೋಗಳನ್ನು ಹಂಚಿಕೊಂಡಿದ್ದರು.

ಕೋವಿಡ್ -19 ಲಾಕ್‌ಡೌನ್ ಮಧ್ಯೆ ನಟ ನಿಖಿಲ್ ಸಿದ್ಧಾರ್ಥ್​ ಮತ್ತು ಪಲ್ಲವಿ ಮದುವೆಯಾಗಿದ್ದರು. ವಿವಾಹದ ನಂತರ ದಂಪತಿಗಳು ಅನ್ಯೋನ್ಯವಾಗಿದ್ದರು. ಕೋವಿಡ್​ ಸಮಯದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತ ಬಳಗವನ್ನು ಆಹ್ವಾನ ಮಾಡಿದ್ದರು.

ನಟ ನಿಖಿಲ್ ಸಿದ್ಧಾರ್ಥ್​ 'ಸ್ಪೈ' ನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡರು, ಇದು ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಅವರು ಪ್ರಸ್ತುತ 'ಸ್ವಯಂಭು' ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net